ಗುಡ್ಡೆಹೊಸೂರು, ಮಾ. 15: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದ ಸರ್ವೆ ನಂ 1/1 ರಲ್ಲಿ ನೆಲೆಸಿರುವ ಸ್ಥಳೀಯರು ಇಲ್ಲಿನ ಗ್ರಾಮ ಪಂಚಾಯಿತಿಯ ಅಧಿಕಾರಿ ಶ್ಯಾಂ ತಮ್ಮಯ್ಯ ಅವರಿಗೆ ಮನೆ ನಿವೇಶನ ಕೋರಿ ಮನವಿ ಪತ್ರ ಸಲ್ಲಿಸಿದರು.
ಅಲ್ಲಿಯ ಕೆಲವರಿಗೆ ಎರಡು ವರ್ಷಗಳ ಹಿಂದೆ ಹಕ್ಕು ಪತ್ರ ನೀಡಲಾಗಿದೆ. ಆದರೂ ಮನೆ ನಿರ್ಮಿಸಲು ಅರಣ್ಯ ಇಲಾಖೆಯವರು ತಡೆ ನೀಡುತ್ತಿದ್ದಾರೆಂದು ಫಲಾನುಭವಿಗಳು ದೂರಿದ್ದಾರೆ. ನಿವಾಸಿಗಳಾದ ದೇವಕಿ, ಕಾಂತ, ತುಳಸಿ ಮುಂತಾದವರು ಹಾಜರಿದ್ದರು. ಹಕ್ಕುಪತ್ರ ನೀಡಿರುವ ಜಾಗವು ಅರಣ್ಯ ಪ್ರದೇಶಕ್ಕೆ ಸೇರಿರುವದರಿಂದ ಮನೆ ನಿರ್ಮಿಸಲು ಮರಗಳನ್ನು ತೆರವುಗೊಳಿಸಬೇಕಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಾಗಿದೆ.