ನಾಪೆÇೀಕ್ಲು, ಮಾ. 15: ಕೊಡಗಿನ ಬೆಳೆ, ಮಳೆದೇವರು ಎಂದು ಪ್ರಖ್ಯಾತಿ ಪಡೆದಿರುವ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಭಕ್ತರಿಗೆ ಸುಗಮವಾಗಿ ಅನ್ನದಾಸೋಹ ನೀಡಲು ನಿರ್ಮಿಸಲಾಗಿರುವ ಹೈಟೆಕ್ ಅನ್ನ ದಾಸೋಹ ಕೊಠಡಿಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತಜನ ಸಂಘ ಜಂಟಿ ಆಶ್ರಯದಲ್ಲಿ ಉದ್ಘಾಟಿಸಲಾಯಿತು.

ದೇವಳ ವ್ಯವಸ್ಥಾಪನಾ ಸಮಿತಿಯ 24.95 ಲಕ್ಷ ಹಾಗೂ ಭಕ್ತಜನ ಸಂಘದ 8.50 ಲಕ್ಷ ಸೇರಿದಂತೆ ಒಟ್ಟು 33 ಲಕ್ಷ ರೂ. ವೆಚ್ಚದಲ್ಲಿ ವಿನೂತನ ಮಾದರಿಯ ವ್ಯವಸ್ಥೆಯನ್ನು ಒಳಗೊಂಡ ಅನ್ನದಾಸೋಹ ಕೊಠಡಿಯನ್ನು ಗಣಹೋಮ ನಡೆಸುವದರ ಮೂಲಕ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಖಜಾಂಚಿ ನಂಬಡಮಂಡ ಸುಬ್ರಮಣಿ, ಸದಸ್ಯರಾದ ಸಣ್ಣುವಂಡ ಡಾ|| ಕಾವೇರಪ್ಪ, ಬಡಕಡ ಸುರೇಶ್ ಬೆಳ್ಯಪ್ಪ, ಕೋಡಿಮಣಿಯಂಡ ಸುರೇಶ್, ಸಮಿತಿ ಸದಸ್ಯರಾದ ಕುಡಿಯರ ಪೆÇನ್ನಪ್ಪ, ಕೇಟೋಳಿರ ಶಾರದಾ ಅಯ್ಯಪ್ಪ, ಧರಣಿ ಸೋಮಣ್ಣ, ಕಲಿಯಂಡ ಸಂಪನ್ ಅಯ್ಯಪ್ಪ, ಬೊಳ್ಳಂಡ ಸರಿ ಗಿರೀಶ್, ಮಾರ್ಚಂಡ ಪ್ರವೀಣ್, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ, ಅಚ್ಚಾಂಡಿರ ಗಣೇಶ್, ಕಣಿಯರ ಗಿರೀಶ್, ಮತ್ತಿತರರು ಇದ್ದರು. ಪೂಜಾ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕ ಇ.ಆರ್.ಕುಶಾ ಭಟ್, ಲವ ಭಟ್, ಶ್ರೀಕಾಂತ್ ಹೆಬ್ಬಾರ್, ಎನ್.ಜಿ.ಸುಬ್ರಮಣ್ಯ ನಡೆಸಿಕೊಟ್ಟರು.