ನಾಪೆÇೀಕ್ಲು, ಮಾ. 15 : ಇತಿಹಾಸ ಹೊಂದಿರುವ ನಾಪೆÉÇೀಕ್ಲು ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ತಾ. 17 ರಿಂದ 21 ರವರೆಗೆ ನಡೆಯಲಿದೆ.

ತಾ, 17 ರಂದು ದೇವ ತಕ್ಕರ ಮನೆಯಿಂದ ಬಂಡಾರ ತರುವದು ರಾತ್ರಿ 9 ಗಂಟೆಗೆ ದೀಪರಾಧನೆ ನಂತರ ಬೊಳಕಾಟ್, 10 ಗಂಟೆಗೆ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಲಿದೆ. 18 ರಂದು ದೇವರ ಮೂರ್ತಿ ಹೊತ್ತು ಊರ ಪ್ರದಕ್ಷಣೆ, 19 ರಂದು ಪವಿತ್ರ ಪಟ್ಟಣಿ ಹಬ್ಬ ಎತ್ತುಪೋರಾಟ, ಅನ್ನದಾನ ನಡೆಯಲಿದೆ. 20 ರಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವದು ನಂತರ ಕಾವೇರಿ ನದಿಯಲ್ಲಿ ದೇವರ ಮೂರ್ತಿಯ ಜಳಕ, ಅಲಂಕಾರ ನಡೆದು ನಗರಾದ್ಯಂತ ಚಂಡೆವಾದ್ಯ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಬಂದು ನೃತ್ಯ ಬಲಿಯೊಂದಿಗೆ ದೇವಾಲಯದ 12 ಸುತ್ತು ಪ್ರದಕ್ಷಿಣೆ ಬರುವದು. ನಂತರ ರಾತ್ರಿಯಿಡಿ ವಿವಿಧ ದೇವರ ಕೋಲ ನರಿಪೂದ, ನುಚ್ಚುಟ್ಟೆ, ಕೊರ್ತಿ ಮೂರ್ತಿಗಳ ಕೋಲಗಳು ನಡೆದು 21 ರ ಬೆಳಿಗ್ಗೆ 10 ಗಂಟೆಗೆ ಕಲ್ಯಾಟ ಅಜ್ಜಪ್ಪ ಕೋಲ, 12 ಗಂಟೆಗೆ ವಿಷ್ಣ್ಣುಮೂರ್ತಿ ಕೋಲ ಮತ್ತು ಅನ್ನದಾನದೊಂದಿಗೆ ಹಬ್ಬ ಸಂಪನ್ನಗೊಳ್ಳಲಿದೆ. - ದುಗ್ಗಳ