ವೀರಾಜಪೇಟೆ, ಮಾ. 16: ವೀರಾಜಪೇಟೆಯ ಮೀನುಪೇಟೆ ಯಲ್ಲಿರುವ ಚೈತನ್ಯ ಮಠಪುರದ ಮುತ್ತಪ್ಪ ದೇವಸ್ಥಾನದ 75ನೇ ವರ್ಷದ ಮುತ್ತಪ್ಪ ತೆರೆ ಮಹೋತ್ಸವವನ್ನು ತಾ. 19 ರಿಂದ 21 ರವರೆಗೆ ಅದ್ಧೂರಿಯಾಗಿ ಆಚರಿಸಲು ಪೂರ್ವ ಸಿದ್ಧತೆ ನಡೆಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀವನ್, ತಾ. 19 ರಂದು ಪ್ರಾತ:ಕಾಲ 5 ಗಂಟೆಗೆ ಗಣಪತಿ ಹೋಮದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವದು. ಸಂಜೆ 5 ಗಂಟೆಗೆ ಮುತ್ತಪ್ಪ ವೆಳ್ಳಾಟಂ, ರಾತ್ರಿ 9 ಗಂಟೆಗೆ ಮುತ್ತಪ್ಪನ್ ಓಣಂ ಅಚರಣಾ ಸಮಿತಿಯ ಪ್ರಾಯೋಜತ್ವದಲ್ಲಿ ಕೇರಳದ ಕಣ್ಣೂರು ಮೇಲೋಡಿಸ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ಮೆಘಾ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ. ತಾ. 20 ರಂದು ಸಂಜೆ 5 ಗಂಟೆಗೆ ಸುಂಕದ ಕಟ್ಟೆಯಿಂದ ಮೊದಲ ಕಲಶ ವಿಶೇಷ ತಾಲಪೋಲಿ ಮೆರವಣಿಗೆ, ಮೆರವಣಿಗೆಯಲ್ಲಿ ಮಯೂರ ನೃತ್ಯ, ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಮೀನುಪೇಟೆಯ ದೇವಾಲಯಕ್ಕೆ ಆಗಮಿಸುವದು. ರಾತ್ರಿ 8 ಗಂಟೆಗೆ ಮುತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೊದಿ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ 8.30 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅನ್ನದಾನ ನಡೆಯಲಿದೆ.

ಸಮಿತಿಯ ಜಂಟಿ ಕಾರ್ಯದರ್ಶಿ ಸಜೀವನ್ ಮಾತನಾಡಿ, ತಾ. 21 ರಂದು ಪ್ರಾತ:ಕಾಲ 1 ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, 4 ಗಂಟೆಗೆ ತಿರುವಪ್ಪನ್, ಬೆಳಿಗ್ಗೆ 8 ಗಂಟೆಗೆ ಭಗವತಿ ಪೋದಿ, 10 ಗಂಟೆಗೆ ವಸೂರಿಮಾಲ, 11 ಗಂಟೆಗೆ ವಿಷ್ಣುಮೂರ್ತಿ ಕೋಲ, ಅಪರಾಹ್ನ 3 ಗಂಟೆಗೆ ವಿಷ್ಣುಮೂರ್ತಿ ಕೋಲದೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುವದು ಎಂದು ಹೇಳಿದರು.

ಸಮತಿಯ ಟಿ.ಎನ್. ಗೋವಿಂದನ್ ಮಾತನಾಡಿ, ತಾ. 19 ರಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡಗು ಹಿಂದು ಮಲೆಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್, ಉದ್ಯಮಿಗಳಾದ ವಿನೋದ್ ತರಮಲ್, ಸಿ.ಪಿ. ಪ್ರಕಾಶ್, ಪಟ್ಟಣ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಕರ್ನಂಡ ಸೋಮಯ್ಯ, ಅಂಗಾಳ ಪರಮೇಶ್ವರಿ ದೇವಾಲಯದ ಅಧ್ಯಕ್ಷ ಟಿ.ಕೆ. ಶೀನಿವಾಸ್ ಉಪಸ್ಥಿತರಿರುವರು. ದೇವಾಲಯ ಅಧ್ಯಕ್ಷ ಇ.ಸಿ. ಜೀವನ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಎಂದು ಹೇಳಿದರು.

ಗೋಷ್ಠಿಯಲ್ಲಿ ದೇವಾಲಯದ ಟ್ರಸ್ಟಿ ಹರ್ಷವರ್ಧನ್ ಉಪಸ್ಥಿತರಿದ್ದರು.