ಚೆಟ್ಟಳ್ಳಿ, ಮಾ. 15: ಸಮೀಪದ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಫೈನಲ್ ಹಂತದಲ್ಲಿ ಗ್ರೀನ್ಸ್ ಕ್ರಿಕೆಟರ್ಸ್ ತಂಡ ಹಾಗೂ ರ್ಯಾಂಬೋ ಕ್ರಿಕೆಟರ್ಸ್ ತಂಡದ ನಡುವೆ ರೋಮಾಂಚನಕಾರಿಯಾಗಿ ನಡೆದ ಪಂದ್ಯಾಟದಲ್ಲಿ ಗ್ರೀನ್ಸ್ ತಂಡ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ರ್ಯಾಂಬೋ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡ ಗ್ರೀನ್ಸ್ ತಂಡವು 6 ಓವರ್ಗಳಿಗೆ ರ್ಯಾಂಬೋ ತಂಡದ ಅಕ್ಷಯ್ ಉಣ್ಣಿ, ಶಾಹುಲ್, ರಾಜೇಶ್ ಮತ್ತು ಫಿರೋಜ್ ಅವರ ವಿಕೆಟ್ ಪಡೆದು 39 ರನ್ಗಳನ್ನು ನೀಡಿತ್ತು. 40 ರನ್ ಮೊತ್ತವನ್ನು ಬೆನ್ನತ್ತಿದ ಗ್ರೀನ್ಸ್ ತಂಡಕ್ಕೆ ರ್ಯಾಂಬೋ ತಂಡವು ಪ್ರಭಲ ಪೈಪೋಟಿ ನೀಡಿತ್ತು. ಗ್ರೀನ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಅಕ್ಷಯ್ (ಅಂಬು) ಮತ್ತು ಶಿವಕುಮಾರ್ ಅವರ ವಿಕೆಟ್ ಪ್ರಾರಂಭದಲ್ಲಿಯೇ ಉರುಳಿಸಿದರು. ಮೊದಲ 4 ಓವರ್ಗಳಿಗೆ ಕೇವಲ 7 ರನ್ಗಳು ಮಾತ್ರ ನೀಡಿ 4 ವಿಕೆಟ್ ಪಡೆದು ಕೊಂಡರು. ಅದಾದ ಬಳಿಕ ಬ್ಯಾಟ್ ಮಾಡಲು ಬಂದ ಸುಬೈರ್ ಮತ್ತು ನೌಶಾದ್ ಜೋಡಿ ಗ್ರೀನ್ಸ್ ತಂಡವನ್ನು ಗೆಲವಿನ ದಡ ಸೇರಿಸಲು ನೆರವಾದರು. 5ನೇ ಓವರ್ನಲ್ಲಿ ಸುಬೈರ್ ಅವರ ಬರ್ಜರಿ ಎರಡು ಸಿಕ್ಸರ್ ಗ್ರೀನ್ಸ್ ತಂಡಕ್ಕೆ ಮರು ಜೀವ ನೀಡಿತ್ತು. ಆ ಓವರ್ನಲ್ಲಿ ಒಟ್ಟು 19 ರನ್ ಕಲೆ ಹಾಕಲಾಯಿತು. ಕೊನೆಯ ಆರು ಎಸೆತದಲ್ಲಿ 14 ರನ್ ಎಂಬ ಹಂತಕ್ಕೆ ಪಂದ್ಯಾಟದ ಸ್ಥಿತಿ ಬದಲಾಗಿತ್ತು. ಕೊನೆಯ ಓವರಿನ ಎರಡನೇ ಎಸತದಲ್ಲಿ ನೌಶಾದ್ ಬಾರಿಸಿದ ಸಿಕ್ಸರ್ ಪಂದ್ಯ ಗೆಲವಿನತ್ತ ಸಾಗಲು ಸಹಕರಿಸಿತು. 1 ಎಸೆತ ಬಾಕಿ ಇರುವಂತೆ ಗ್ರೀನ್ಸ್ ತಂಡವು ಗೆಲುವಿನ ನಗೆ ಬೀರಿ ಚಾಂಪಿಯನ್ ಪಟ್ಟ ಅಲಂಕರಿಸಿ ಕೊಂಡಿತು. ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗ್ರೀನ್ಸ್ ತಂಡದ ಸುಬೈರ್, ಸರಣಿ ಶ್ರೇಷ್ಠ ನಿಖಿಲ್ (ಗ್ರೀನ್ಸ್), ಉತ್ತಮ ಬ್ಯಾಟ್ಸ್ಮನ್ ಮತ್ತು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ನಿಖಿಲ್ ಉಣ್ಣಿ (ರ್ಯಾಂಬೋ), ಉತ್ತಮ ಬೌಲರ್ ಸಿರಾಜ್ (ಬ್ಲಾಕ್ ವಾರಿಯರ್), ಉತ್ತಮ ಫೀಲ್ಡರ್ ರತೀಶ್ (ಝಲ್ಲಾ) ಮತ್ತು ಉತ್ತಮ ತಂಡ ಪ್ರಶಸ್ತಿಯನ್ನು ಬ್ಲಾಕ್ ವಾರಿಯರ್ಸ್ ತಂಡವು ಪಡೆದು ಕೊಂಡಿತು.
ಆಟಗಾರರನ್ನು ಬಿಡ್ ಮಾಡುವ ಮೂಲಕ ತಂಡಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಂದ್ಯಾಟದಲ್ಲಿ ಕೂರ್ಗ್ ಸ್ಟಾರ್, ಬ್ಲಾಕ್ ವಾರಿಯರ್ಸ್, ಬಿಯಡ್ರ್ಸ್, ರ್ಯಾಂಬೋ ಯೂತ್ ಕ್ಲಬ್, ಕೇಸರಿ ಟೈಗರ್ಸ್, ಝಲ್ಲಾ ಕ್ರಿಕೆಟರ್ಸ್, ಟೀಂ 53, ಸ್ಟ್ರೈಕ್ ಫೋರ್ಸ್, ಫೋನಿಕ್ಸ್ ಮತ್ತು ಗ್ರೀನ್ಸ್ ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಮೊಹಮ್ಮದ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುಂಡ ಸ್ವಾಮಿ, ಕೊಡಗು ಚಾಂಪಿಯನ್ಸ್ ಲೀಗ್ ಸ್ಥಾಪಕ ಮುಸ್ತಫಾ, ಗ್ರಾ.ಪಂ. ಸದಸ್ಯರಾದ ಅಫ್ಸಲ್, ಸಾಬು ವರ್ಗೀಸ್, ಹನೀಫ, ಅನ್ನಮ್ಮಾ, ಶಂಸೀರ್, ತುಷಾರ ಮಾಲಿಕ ಬಾಬು, ಅಭಿತಾ ಬಾಬು, ಜಾಬೀರ್, ಗಿರೀಶ್, ಹಕೀಂ, ಸಂಶೀರ್ ಮತ್ತಿತರರು ಇದ್ದರು.