ವಿರಾಜಪೇಟೆ:ಮಾ:14: ದಾಂಪತ್ಯ ಜೀವನದಲ್ಲಿ ವಿರಸಗೊಂಡು ಮದ್ಯ ಸೇವನೆಯಲ್ಲಿ ವಿಷ ಪ್ರಾಶಾನ ಮಾಡಿ ಅತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ಮೂರ್ನಾಡು ಸಮೀಪದ ಹೊದ್ದೂರು ಪಾಲೆಮಾಡು ಪೈಸಾರಿ ನಿವಾಸಿ ಮಂಜಪ್ಪ ಅವರ ಪುತ್ರ ರಮೇಶ್. ಎಂ (35) ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾದ ವ್ಯಕ್ತಿ. ರಮೇಶ್ ಮದ್ಯ ಪಾನಿಯಾಗಿದ್ದ ಎನ್ನಲಾಗಿದ್ದು, ಪತಿಯ ನಡವಳಿಕೆಯಿಂದ ಬೇಸತ್ತ ಪತ್ನಿ ನಳಿನಿ ಮಗವಿನೊಂದಿಗೆ ಒಂದು ವರ್ಷದ ಹಿಂದೆ ತವರು ಮನೆ ಸೇರಿದ್ದರು. ನಿನ್ನೆ ದಿನ ವೀರಾಜಪೇಟೆ ಪಂಜರ್ ಪೇಟೆಯ ತಂಗುದಾಣದಲ್ಲಿ ರಮೇಶ್ ಮದ್ಯದೊಂದಿಗೆ ವಿಷವನ್ನು ಬೆರೆಸಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಅಕ್ಕ ಯಶೋಧ ನೀಡಿದ ದೂರಿನ ಮೇರೆಗೆ ನಗರದ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. -ಕೆ.ಕೆ.ಎಸ್.