ಮಡಿಕೇರಿ, ಮಾ. 14: ಜೆ.ಡಿ.ಎಸ್. ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನದ ಕುರಿತಾಗಿ ಇಂದು ಪಕ್ಷದ ಕೆಲವು ಪ್ರಮುಖರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರೊಂದಿಗೆ ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರೊಂದಿಗೆ ಸಮಾಲೋಚಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ನೇಮಕಾತಿ ಮಾಡಿರುವ ಅಧ್ಯಕ್ಷ ಕೆ.ಎಂ. ಗಣೇಶ್ ಅವರ ಬಗ್ಗೆ ಚರ್ಚೆ ನಡೆದಿರುವದಾಗಿ ತಿಳಿದುಬಂದಿದೆ. ಚುನಾವಣೆ ಬಳಿಕ ತಾವೇ ಜಿಲ್ಲೆಗೆ ಭೇಟಿ ನೀಡುವದಾಗಿ ಈ ಸಂದರ್ಭ ದೇವೇಗೌಡರು ತಿಳಿಸಿದ್ದು, ಗೊಂದಲಕ್ಕೆ ತೆರೆ ಎಳೆಯುವ ಭರವಸೆ ನೀಡಿದ್ದಾರೆನ್ನಲಾಗಿದೆ. ಶ್ರೀನಿವಾಸ್ ಚಂಗಪ್ಪ ಅವರೊಂದಿಗೆ ಮಾಜಿ. ಜಿ.ಪಂ. ಸದಸ್ಯ ಹೆಚ್.ಬಿ. ಗಣೇಶ್, ಪ್ರಮುಖರಾದ ವಿ.ಪಿ. ದೇವರಾಜು, ಕರ್ತಮಾಡ ನರು, ಉಳುವಂಗಡ ದತ್ತ, ಮಾಂಗೆರ ಸಾಬು, ಮತ್ರಂಡ ಸುಕು, ಅಮ್ಮಂಡ ವಿವೇಕ್, ಕಾರ್ಮಾಡು ವಿಜಯ, ಪಿ.ಹೆಚ್. ಮುತ್ತ, ಮಚ್ಚಮಾಡ ಮಾಚು ಪಾಲ್ಗೊಂಡಿದ್ದರು.