ಸಿದ್ದಾಪುರ, ಮಾ. 14: ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿ ಅಪ್ರಾಪ್ತೆ ಬಾಲಕಿಯ ಮೇಲೆ ಸಿ.ಆರ್.ಪಿ.ಎಫ್. ಯೋಧನೊಬ್ಬ ಅತ್ಯಾಚಾರ ನಡೆಸಿದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ರಾಜ್ಯದ ವಯನಾಡಿನ ನಿವಾಸಿ ಸಿ.ಆರ್.ಪಿ.ಎಫ್. ಯೋಧನಾಗಿರುವ ನಿತಿನ್ ಎಂಬಾತ ಅತ್ಯಾಚಾರ ನಡೆಸಿದ ಆರೋಪದಡಿಯಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ. ಆರೋಪಿ ರಜೆಯ ಮೇಲೆ ಹೆರಿಗೆಯಾಗಿದ್ದ ತನ್ನ ಪತ್ನಿಯನ್ನು ನೋಡಲು ಬಂದಿದ್ದ ವೇಳೆ ಕೃತ್ಯ ಎಸಗಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಪೊಲೀಸರು ನೆಲ್ಲಿಹುದಿಕೇರಿ ನಲ್ವತ್ತೆಕ್ರೆ ಬರಡಿ ಗ್ರಾಮದ ಮುಜೀಬ್ ಎಂಬಾತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.