ಗೋಣಿಕೊಪ್ಪ ವರದಿ, ಮಾ. 14 : ಹೃದಯಾಘಾತದಿಂದ ಕಾಲೇಜು ವಿದ್ಯಾರ್ಥಿ ಮಲಗಿದ್ದ ಸ್ಥಿತಿಯಲ್ಲಿಯೇ ಸಾವಿಗೀಡಾದ ಘಟನೆ ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಸ್ಟೆಲ್‍ನಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲಬಗಿ ಗ್ರಾಮದ ರಘುನಾಥ್ ಹಾಗೂ ಶೋಭ ದಂಪತಿಯ ಪುತ್ರ ವಿಜಯಕುಮಾರ್ ನಲ್ವಾಡೆ (22) ಮೃತ ವಿದ್ಯಾರ್ಥಿ.
ಹಾಸ್ಟೆಲ್‍ನಲ್ಲಿ ಬೆಳಗ್ಗೆ ನಿದ್ರೆಯಿಂದ ಎದ್ದೇಳದಿದ್ದಾಗ ಸಹ ವಿದ್ಯಾರ್ಥಿಗಳು ಗೋಣಿಕೊಪ್ಪ ಖಾಸಗಿ ಆಸ್ಪತ್ರೆಗೆ ಕರೆತಂದ ಸಂದರ್ಭ ಸಾವಿಗೀಡಾಗಿರುವದು ತಿಳಿದು ಬಂದಿದೆ.