ಕೂಡಿಗೆ, ಮಾ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ವಲಯದ ಅರಶಿನಗುಪ್ಪೆ ಕಾರ್ಯಕ್ಷೇತ್ರದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಗ್ರಾಮೀಣ ಸಿರಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಕೊಡಗು ಜಿಲ್ಲಾ ನಿರ್ದೇಶಕ ಯೋಗೇಶ್ ಉದ್ಘಾಟಿಸಿದರು. ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗ ಮಾಡುವ ಮೂಲಕ ಕುಟುಂಬದ ಆರ್ಥಿಕ ಮುಗ್ಗಟ್ಟನ್ನು ಹೆಚ್ಚಿಸಬಹುದು ಎಂದರು. ಸಿರಿ ಮಳಿಗೆಗಳಲ್ಲಿ ಸಿರಿ ಉಪ್ಪಿನಕಾಯಿ, ಅಕ್ಕಿರೊಟ್ಟಿ, ಸಿರಿ ಧಾನ್ಯ ಹಾಗೂ ಇನ್ನಿತರ ವಸ್ತುಗಳು ದೊರಕುತ್ತದೆ ಎಂದರು. ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇಂಥ ಸಿರಿ ಉದ್ಯೋಗದ ಮೂಲಕ ಪ್ರೋತ್ಸಾಹ ನೀಡುತ್ತಿದ್ದರೆ ಸಿರಿ ಧಾನ್ಯಗಳನ್ನು ಹೆಚ್ಚಿನ ಜನರು ಬಳಕೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭ ಸಿರಿ ಮಾರಾಟ ಮೇಲ್ವಿಚಾರಕ ಹರೀಶ್ ಶಾಂತಳ್ಳಿ, ವಲಯ ಮೇಲ್ವಿಚಾರಕ ಕೆ. ವಿನೋದ್‍ಕುಮಾರ್, ಸೇವಾಪ್ರತಿನಿಧಿ ಮಂಜುಳಾ, ಸಿರಿ ಮಳಿಗೆ ಮಾಲೀಕರಾದ ನಿರ್ಮಲ ಸುರೇಶ್, ಒಕ್ಕೂಟದ ಉಪಾಧ್ಯಕ್ಷೆ ಪಾರ್ವತಿ ಉಪಸ್ಥಿತರಿದ್ದರು.