ಕೂಡಿಗೆ, ಮಾ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಚಿಕ್ಕತ್ತೂರು ಕಾರ್ಯಕ್ಷೇತ್ರದಲ್ಲಿ ಹಾರಂಗಿ ಧರ್ಮದೇವತೆ ಸಂಘದ ಮಾರಿಯಮ್ಮ ಅವರ ಪತಿ ಗೋವಿಂದ ಸ್ವಾಮಿ ಅವರಿಗೆ ಮಾಸಾಶನ ವಿತರಿಸಲಾಯಿತು.

ತೆಂಗಿನ ಮರದಿಂದ ಬಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದು, ದುಡಿಯುವ ಶಕ್ತಿ ಕಳೆದುಕೊಂಡು ಕುಟುಂಬದ ನಿರ್ವಹಣೆ ಹಾಗೂ ಔಷಧದ ಖರ್ಚಿಗೆ ಕಷ್ಟವಾಗಿರುವದನ್ನು ತಿಳಿದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಿಂಗಳ ಮಾಶಾಸನ ರೂ. 750ರಂತೆ ಹೆಗ್ಗಡೆಯವರು ಮಂಜೂರು ಮಾಡಿದ್ದು, ನಗದು ಸಹಾಯಕರಾದ ನಂದೀಶ್ ಅವರು ಗೋವಿಂದಸ್ವಾಮಿ ಪತ್ನಿ ಮಾರಿಯಮ್ಮ ಅವರಿಗೆ ವಿತರಿಸಿ ಸಾಂತ್ವನ ತಿಳಿಸಿದರು. ಮಾಸಾಶನ ಮಂಜೂರಾತಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸಹಕರಿಸಿದರು. ಈ ಸಂದರ್ಭ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.