ಶನಿವಾರಸಂತೆ, ಮಾ. 14: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಸಹಾಯಕ ಠಾಣಾಧಿಕಾರಿ ಐ.ಜೆ. ಸುರೇಶ್ (ಸೋಮವಾರಪೇಟೆ ಪೊಲೀಸ್ ಠಾಣೆ), ಹೆಡ್ ಕಾನ್ಸ್‍ಟೇಬಲ್ ಕೆ.ಪಿ. ರಮೇಶ್ (ವೀರಾಜಪೇಟೆ ಠಾಣೆ) ಹಾಗೂ ಕಾನ್ಸ್‍ಟೇಬಲ್ ಟಿ.ಎಸ್. ಮಂಜುನಾಥ (ನಾಪೋಕ್ಲು ಠಾಣೆ) ಅವರುಗಳಿಗೆ ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಕೊಡ್ಲಿಪೇಟೆ ಉಪ ಠಾಣೆಯ ಪೊಲೀಸರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ಅವರು ಮಾತನಾಡಿ ಪೊಲೀಸರಿಗೆ ವರ್ಗಾವಣೆ ಸಾಮಾನ್ಯ.

ಮುಂದಿನ ಠಾಣೆಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಶುಭ ಹಾರೈಸಿದರು.

ವರ್ಗಾವಣೆಗೊಂಡಿರುವ ಪೊಲೀಸರುಗಳಾದ ಸುರೇಶ್, ರಮೇಶ್ ಹಾಗೂ ಮಂಜುನಾಥ ಅವರುಗಳು ಮಾತನಾಡಿದರು. ಸಮಾರಂಭದಲ್ಲಿ ಸಹಾಯಕ ಠಾಣಾಧಿಕಾರಿಗಳಾದ ನಂಜುಂಡೇಗೌಡ, ಕೃಷ್ಣೇಗೌಡ, ಹೆಚ್.ಎಂ. ಗೋವಿಂದ್, ಚೆಲುವರಾಜ್ ಹಾಗೂ ಪೊಲೀಸರು ಉಪಸ್ಥಿತರಿದ್ದು, ಹೆಡ್ ಕಾನ್ಸ್‍ಟೇಬಲ್ ಹೆಚ್.ಬಿ. ಶಿವಣ್ಣ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.