ಕುಶಾಲನಗರ, ಮಾ. 14: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರ ಕೆರೆ ಯೋಜನೆಯಡಿ ಗೋಣಿಮರೂರು ಗ್ರಾ.ಪಂ.ಗೆ ಒಳಪಡುವ ನಾಗವಳ ಗ್ರಾಮದ ಕೆರೆಯ ದುರಸ್ತಿ ಕಾರ್ಯಕ್ಕೆ ಸಮಿತಿ ರಚಿಸಲಾಯಿತು.
ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ಹೆಬ್ಬಾಲೆ ವಲಯದ ಮೇಲ್ವಿಚಾರಕ ವಿನೋದ್ಕುಮಾರ್, ಕೃಷಿ ಮೇಲ್ವಿಚಾರಕಿ ಗೀತಾ ಅವರ ಉಪಸ್ಥಿತಿಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಂಜಪ್ಪ, ಉಪಾಧ್ಯಕ್ಷರಾಗಿ ರಂದನ್ ಪ್ರಿಯಾ, ಕೋಶಾಧಿಕಾರಿಗಳಾಗಿ ತಿಮ್ಮಯ್ಯ ಅವರನ್ನು ನಿಯೋಜಿಸಲಾಯಿತು.
ಈ ಸಂದರ್ಭ ಮಾತನಾಡಿದ ಯೋಜನಾಧಿಕಾರಿ ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಪುನಶ್ಚೇತನಕ್ಕೆ ಚಿಂತನೆ ಹರಿಸಲಾಗಿದೆ. ಹೂಳೆತ್ತುವ ಮೂಲಕ ಕೆರೆಗಳನ್ನು ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಒದಗಿಸಲಾಗುವದು. ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ಯೋಜನೆಯ ಸೇವಾ ಪ್ರತಿನಿಧಿಗಳಾದ ಸರೋಜ, ಉಷಾ, ಒಕ್ಕೂಟದ ಕಾರ್ಯದರ್ಶಿ ಪುನಿತ್ ಹಾಜರಿದ್ದರು.