ಮಡಿಕೇರಿ, ಮಾ. 14: ಮೇಕೇರಿಯ ಮಖಾಂ ಉರೂಸ್ ತಾ. 15 ರಿಂದ 18 ರವರೆಗೆ ಮೇಕೇರಿಯ ಕಿಜರ್ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ ನಡೆಯಲಿದೆ. ತಾ. 15 ರಂದು ಸಂಜೆ ಖತಂ ದುವಾ ಹಾಗೂ ಮಹ್ಳರತುಲ್ ಬದ್ರಿಯಾ ಸಯ್ಯಿದ್ ಖಾತಿಂ ಸಖಾಫಿ ಅಲ್ ಹೈದ್ರೂಸಿ ನೇತೃತ್ವದಲ್ಲಿ ನಡೆಯಲಿದೆ.
ತಾ. 16 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನ ಸಂಗಮ ಖುರ್ರತು ಸದಾತ್ ಸಯ್ಯಿದ್ ಫಝಲ್ ಕೊಯಮ್ಮ ತಂಞಳ್ ಕೂರತ್ ನೇತೃತ್ವದಲ್ಲಿ ಸಂಜೆ ಸಯ್ಯಿದ್ ಜಾಫರ್ ಸ್ವಾದಿಕ್ ತಂಞಳ್ ಕುಂಬುಳ್ ನೇತೃತ್ವದಲ್ಲಿ ನೆರವೇರಲಿದೆ. ತಾ. 17 ರಂದು ಸಾರ್ವಜನಿಕ ಕಾರ್ಯಕ್ರಮ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೂಸಿ (ಎರುಮಾಡ್ ತಂಞಳ್) ನೆರವೇರಿಸಲಿದ್ದು, ಮುಖ್ಯ ಭಾಷಣವನ್ನು ಸುಫ್ಯಾನ್ ಸಖಾಫಿ, ಕಾವಳಕಟ್ಟೆ ಮಾಡಲಿದ್ದಾರೆ. ತಾ. 18 ರಂದು ಲುಹರ್ ನಮಾಜ್ ಬಳಿಕ ಮೌಲಿದ್ ಪಾರಾಯಣ ನಡೆಯಲಿದ್ದು, ಸಂಜೆ 3.30 ಕ್ಕೆ ಸಂದಲ್ ಮೆರವಣಿಗೆ ಹಾಗೂ 4.30 ಕ್ಕೆ ಅನ್ನದಾನ ನೆರವೇರಲಿದೆ ಎಂದು ಮಸೀದಿ ಆಡಳಿತ ಮಂಡಳಿ ತಿಳಿಸಿದೆ.