ಸೋಮವಾರಪೇಟೆ, ಮಾ.14: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಅಬಕಾರಿ ಇಲಾಖೆ ಎಚ್ಚೆತ್ತಿದ್ದು, ಅಕ್ರಮ ಮದ್ಯ ಸಂಗ್ರಹ ಮತ್ತು ಮಾರಾಟ ಪ್ರಕರಣಗಳನ್ನು ಬಯಲಿಗೆಳೆಯುತ್ತಿದೆ. ಅಂತೆಯೇ ತಾಲೂಕಿನ ಶನಿವಾರಸಂತೆಯ ಹೊಟೇಲ್‍ನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ರಮ ಮದ್ಯ ಸಹಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಹೊಟೇಲ್‍ನಲ್ಲಿ ಶೇಖರಿಸಿಟ್ಟಿದ್ದ ಅಂದಾಜು 4,711 ರೂಪಾಯಿ ಮೌಲ್ಯದ ಮದ್ಯ ಸಹಿತ ಆರೋಪಿ ಎಂ.ಬಿ. ಭಾಸ್ಕರ ಎಂಬಾತನನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಉಪನಿರೀಕ್ಷಕ ಸಿ.ಎಂ. ಮಹದೇವ, ಸಿಬ್ಬಂದಿ ವಿರೂಪಾಕ್ಷ ಭಾಗವಹಿಸಿದ್ದರು.