ಗೋಣಿಕೊಪ್ಪಲು, ಮಾ. 13: ಇಲ್ಲಿಗೆ ಸಮೀಪ ಅರುವತ್ತೊಕ್ಕಲು ಗ್ರಾಮದ ಶ್ರೀ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವವು ತಾ.16 ಹಾಗೂ ತಾ.17 ರಂದು ನಡೆಯಲಿದೆ.
ತಾ.16 ರಂದು ಸಂಜೆ 5.30 ಗಂಟೆ ಗೆ ತಕ್ಕರ ಮನೆಯಿಂದ ಭಂಡಾರ ಇಳಿಸುವದು. ತಾ.17 ಬೆಳಿಗ್ಗೆ ದೇವರು ಬೆಂಕಿ ಕೆಂಡ ಹಾಯುವದು. ಬೆಳಿಗ್ಗೆ 9 ಗಂಟೆಯ ನಂತರ ಹರಕೆ, ಭಂಡಾರ ಒಪ್ಪಿಸುವದು ಎಂದು ದೇವಸ್ಥಾನ ಮುಖ್ಯಸ್ಥರು ತಿಳಿಸಿದ್ದಾರೆ.