ಗುಡ್ಡೆಹೊಸೂರು, ಮಾ. 12: ಇಲ್ಲಿಗೆ ಸಮೀಪದ ಮಾದಾಪಟ್ಟಣ ಗ್ರಾಮದ ಮುಖ್ಯ ರಸ್ತೆಯ ಡಾಮರೀಕರಣ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಯು ರೂ. 50 ಲಕ್ಷ ಹಣದಲ್ಲಿ ನಡೆಯಲಿದೆ.

ಗಂಧದಕೋಟೆಯ ಬಳಿ ಮತ್ತೊಂದು ರಸ್ತೆಗೆ ರೂ. 50 ಲಕ್ಷ ಅನುದಾನದ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಮತ್ತು ಜಿ.ಪಂ. ಸದಸ್ಯೆ ಮಂಜುಳ, ಗ್ರಾ.ಪಂ. ಸದ್ಯರಾದ ಪ್ರವೀಣ್, ಬಸವರಾಜ್, ಪುಷ್ಪ, ಡಾಟಿ, ಕುಶಾಲನಗರ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಗ್ರಾ.ಪಂ. ಸದಸ್ಯೆ ಪಾರ್ವತಿ ಮತ್ತು ಗ್ರಾಮಸ್ಥರು ಹಾಜರಿದ್ದರು.