ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನನಗೆ ನೀಡಿದ್ದು, ಹಿರಿಯರ ಆಜ್ಞೆಯನ್ನು ಪಾಲಿಸುವದು ನನ್ನ ಕರ್ತವ್ಯವಾಗಿದೆ. ವರಿಷ್ಠರ ಸೂಚನೆಯಂತೆ ನಾನು ಜಿಲ್ಲಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಪಕ್ಷದಲ್ಲಿರುವ ಪ್ರತಿಯೊಬ್ಬರ ಸಲಹೆ ಸೂಚನೆಗಳನ್ನು ಪಡೆದೇ ಪಕ್ಷವನ್ನು ಬೆಳೆಸುತ್ತೇನೆ ಎಂದು ಕೆ.ಎಂ. ಗಣೇಶ್ ಹೇಳಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೆಡಿಎಸ್ ನಾಯಕರಾದ ಬಿ.ಎ. ಜೀವಿಜಯ ಅವರು ತಮ್ಮ ಪುತ್ರನನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕೆಂದು ಬಯಸಿದ್ದರು. ಆದರೆ ವರಿಷ್ಠರು ಆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ನನ್ನನ್ನು ಕೂಡ ತಮ್ಮ ಪುತ್ರನೆಂದು ಭಾವಿಸಿ ಪಕ್ಷ ಸಂಘಟನೆಗೆ ಅಗತ್ಯ ಸಹಕಾರ, ಸಲಹೆ, ಸೂಚನೆ ನೀಡಿ ಪ್ರೋತ್ಸಾಹಿಸಲಿ ಎಂದು ಗಣೇಶ್ ಆಶಿಸಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು, ಪಕ್ಷವನ್ನು ಬಲಗೊಳಿಸುವ ವಿಶ್ವಾಸ ನನಗಿದೆ. ಜೀವಿಜಯ ಅವರೂ ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಮಾರ್ಗದರ್ಶನದಲ್ಲೇ ಮುನ್ನಡೆಯುವದಾಗಿ ಸ್ಪಷ್ಟಪಡಿಸಿದ್ದಾರೆ.