ಗೋಣಿಕೊಪ್ಪಲು, ಮಾ. 12: ಜಪಾನ್ನ ಟೋಕಿಯೋದಲ್ಲಿ ತಾ.13 ರಿಂದ ತಾ.19ರವರೆಗೆ ನಡೆಯಲಿರುವ 9ನೇ ವಿಶ್ವ ಶಿಟೋರಿಯೋ ಕರಾಟೆ ಪಂದ್ಯಾವಳಿಗೆ ಭಾರತದ ಕರಾಟೆ ಫೆಡರೇಷನ್ ಅಧ್ಯಕ್ಷ ಅರುಣ್ಮಾಚಯ್ಯ ಮತ್ತು ತಂಡ ಇಂದು ಪ್ರಯಾಣ ಬೆಳೆಸಿದೆ.ಭಾರತ ತಂಡದ ನಾಯಕತ್ವ ವಹಿಸಿರುವ ಅರುಣ್ಮಾಚಯ್ಯ ತಂಡದಲ್ಲಿ ಒಟ್ಟು 38 ಮಂದಿ ಕರಾಟೆ ಪಟುಗಳು ವಿವಿಧ ವಿಭಾಗದಲ್ಲಿ ಸೆಣಸಲಿದ್ದಾರೆ.ತಂಡವನ್ನು ಅರುಣ್ಮಾಚಯ್ಯ ಅವರ ಶಿಷ್ಯರು ಹಾಗೂ ಕರಾಟೆ ತರಬೇತುದಾರರಾದ ಪ್ರಸಾದ್ದೇವಯ್ಯ,ಜಮ್ಮಡ ಜಯ ಜೋಯಪ್ಪ ಮತ್ತು ಕಿಶೋರ್ ಅಯ್ಯಣ್ಣ ಅವರು ಶುಭ ಹಾರೈಸಿ ಬೀಳ್ಕೊಟ್ಟರು.