ವೀರಾಜಪೇಟೆ, ಮಾ. 12: ರಾಹುಲ್ ಗಾಂಧಿ ಅವರ ಉಸ್ತುವಾರಿಯಲ್ಲಿ ಐದು ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ್ದು ಆ ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುವದರ ಮೂಲಕ ರೈತ ಪರ, ಜನ ಪರ ನಿಲುವು ಹೊಂದಿದ್ದಾರೆ ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಟಿ.ಎಂ. ಸಹೀದ್ ಹೇಳಿದರು.
ಲೋಕಸಭಾ ಚುನಾವಣೆಯ ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವೀರಾಜಪೇಟೆಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಡನೆ ಪಕ್ಷದ ಸಂಘಟನೆ ಕುರಿತು ಪ್ರವಾಸಿ ಮಂದಿರದಲ್ಲಿ ಇಂದು ಸಮಾಲೊಚನೆ ನಡೆಸಿದ ಸಹೀದ್ ಅವರು ಮಾತನಾಡಿ ಈಗಿನ ಕೇಂದ್ರ ಸರಕಾರ ನುಡಿದಂತೆ ನಡೆದಿಲ್ಲ ಎಂದರು.
ಕೊಡಗಿನ ಸಂಸದರು ಓರ್ವ ಪತ್ರಕರ್ತನಾಗಿ, ಸಂಸದನಾಗಿ ಉತ್ತಮ ಕೆಲಸ ಮಾಡವ ನಿರೀಕ್ಷೆ ಹುಸಿಯಾಗಿದೆ. ಎಂದು ಆರೋಪಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಹನೀಫ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಕಾರ್ಯಕರ್ತರುಗಳಾದ ಡಿ.ಪಿ. ರಾಜೇಶ್, ಪಟ್ಟಡ ರಂಜಿ ಪೂಣಚ್ಚ, ಏಜಾಜ್ ಅಹಮ್ಮದ್. ಜಿ.ಜಿ. ಮೋಹನ್, ಎಂ.ಎಂ. ಶಶಿಧರ್ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.