ನಾಪೆÇೀಕ್ಲು, ಮಾ. 13: ಸಮೀಪದ ಕುಂಬಾರಕೊಪ್ಪಲು ಬೆಟ್ಟಗೇರಿ ಶ್ರೀ ರಾಮ ಮತ್ತು ಶ್ರೀ ದೇವಿ ದೇವಳದ ವಾರ್ಷಿಕ ಉತ್ಸವವು ಇಂದು ಅಂದರೆ ತಾ. 14ರಂದು (ಇಂದು) ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ವಾರ್ಷಿಕ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ದೇವರ ಅವಭೃತ ಸ್ನಾನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಆಡಳಿತ ಮಂಡಳಿ ಕೋರಿದೆ.