ಮೂರ್ನಾಡು, ಮಾ. 11 : ಪರಿಸರವನ್ನು ಉಳಿಸಿ ಬೆಳೆಸುವದು ನಮ್ಮೇಲ್ಲರ ಜವಬ್ದಾರಿ ಎಂದು ಲಯನ್ಸ್ ಕ್ಲಬ್‍ನ ಪ್ರಾಂತೀಯ ಅಧ್ಯಕ್ಷ ಪರವಂಗಡ ಬೋಸ್ ಪೆಮ್ಮಯ್ಯ ಹೇಳಿದರು. ಮೂರ್ನಾಡು ಲಯನ್ಸ್ ಕ್ಲಬ್, ಮಡಿಕೇರಿ ಲಯನ್ಸ್ ಕ್ಲಬ್ ಹಾಗೂ ವೀರಾಜಪೇಟೆ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾದ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಪಿ. ಗಣಪತಿ ಬೋಪಣ್ಣ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ. ದಾಮೋದರ್, ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ತ್ರಿಶು ಗಣಪತಿ, ಮೂರ್ನಾಡು ಲಯನ್ಸ್ ಕಾರ್ಯದರ್ಶಿ ಎಂ. ನವೀನ್ ಕಾರ್ಯಪ್ಪ, ಮಡಿಕೇರಿ ಲಯನ್ಸ್ ಕಾರ್ಯದರ್ಶಿ ಪಿ.ಪಿ. ಸೋಮಣ್ಣ, ವೀರಾಜಪೇಟೆ ಲಯನ್ಸ್ ಕಾರ್ಯದರ್ಶಿ ಪಿ.ಜಿ. ಪ್ರದಾನ್ ತಮ್ಮಯ್ಯ, ಮೂರ್ನಾಡು ಲಯನ್ಸ್ ಖಜಾಂಚಿ ಬಿ.ಪಿ. ಸುಬ್ರಮಣಿ, ಮಡಿಕೇರಿ ಲಯನ್ಸ್ ಖಜಾಂಚಿ ಬಿ.ಸಿ. ನಂಜಪ್ಪ, ವೀರಾಜಪೇಟೆ ಲಯನ್ಸ್ ಖಜಾಂಚಿ ಕೆ.ಪಿ. ನಿಯಾಜ್, ವಲಯಾಧ್ಯಕ್ಷ ಡಾ. ಸೂರಜ್ ಉತ್ತಪ್ಪ, ಜೆ.ವಿ. ಕೋಟಿ, ಎಚ್.ಸಿ. ಮಹೇಶ್, ಸಬಿತ ಪೆಮ್ಮಯ್ಯ, ಬಿಂದ್ಯ ಬೋಪಣ್ಣ ಉಪಸ್ಥಿತರಿದ್ದರು.