ವೀರಾಜಪೇಟೆ, ಮಾ. 11: ಕುಕ್ಲೂರು ಗ್ರಾಮದ ಮುತ್ತಪ್ಪ ದೇವಸ್ಥಾನದ “ಮುತ್ತಪ್ಪ ತೆರೆ ಮಹೋತ್ಸವವು” ತಾ: 13 ಹಾಗೂ 14ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಾ.13ರಂದು ಬೆಳಿಗ್ಗೆ 10.30 ಗಂಟೆಗೆ ದೇವಾಲಯದ ಸಭಾಂಗಣದಲ್ಲಿ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವದು ಸಂಜೆ 6 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, ರಾತ್ರಿ 7 ಗಂಟೆಗೆ ಶಾಸ್ತಪ್ಪ ವೆಳ್ಳಾಟಂ 9 ಗಂಟೆಗೆ ಗುಳಿಗ ವೆಳ್ಳಾಟಂ, 10.30 ಗಂಟೆಗೆ ಬಸುರಿಮಾಲ ವೆಳ್ಳಾಟಂ ನಡೆಯಲಿದೆ.

ತಾ. 14ರಂದು ಬೆಳಗಿನ ಜಾವ 4 ಗಂಟೆಗೆ ಗುಳಿಗನ ತೆರೆ, ಮುಂಜಾನೆ 5.30 ಗಂಟೆಗೆ ಮುತ್ತಪ್ಪನ್ ಹಾಗೂ ತಿರುವಪ್ಪನ್ ತೆರೆ, ಬೆಳಿಗ್ಗೆ 7 ಗಂಟೆಯಿಂದ ಶಾಸ್ತಪ್ಪನ್ ತೆರೆ, 9 ಗಂಟೆಗೆ ಕರಿಂಗುಟ್ಟಿ ಶಾಸ್ತಪ್ಪನ್ ವಿಶೇಷ ತೆರೆ, ಬೆಳಿಗ್ಗೆ 11 ಗಂಟೆಯಿಂದ ಬಸುರಿಮಲ ತೆರೆ ಜರುಗಲಿದೆ. ತಾ. 13ರಂದು ರಾತ್ತಿ 8.30 ಗಂಟೆಗೆ ಹಾಗೂ ತಾ.14ರಂದು ಅಪರಾಹ್ನ 12 ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿಯ ಟಿ.ಆರ್.ಹರ್ಷ ತಿಳಿಸಿದ್ದಾರೆ.