ಮಡಿಕೇರಿ, ಮಾ. 11: ಹೊಟೇಲ್‍ವೊಂದರಲ್ಲಿ ಅಕ್ರಮವಾಗಿ ಸ್ವದೇಶಿ ಮದ್ಯ ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಅಬಕಾರಿ ವಿಚಕ್ಷಣಾ ದಳದವರು ಮದ್ಯ ವಶಪಡಿಸಿಕೊಂಡು ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.ಕುಶಾಲನಗರ ಬಳಿಯ ಬೈಚನಹಳ್ಳಿಯ ರೆಸ್ಟೋರೆಂಟ್ ಒಂದರಲ್ಲಿ ಮದ್ಯ ಶೇಖರಿಸಿಟ್ಟಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿದ ಜಿಲ್ಲಾ ಅಬಕಾರಿ ವಿಚಕ್ಷಣಾ ದಳದವರು 20.510 ಐಎಂಎಲ್‍ನಷ್ಟು ವಿವಿಧ ಬ್ರಾಂಡ್‍ಗಳ ಮದ್ಯದ ಬಾಟಲಿಗಳು ಹಾಗೂ 39.115 ಲೀ ಬೀಯರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಮದ್ಯದ ಒಟ್ಟು ಮೊತ್ತ ರೂ. 28 ಸಾವಿರ ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ರತನ್ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಬಕಾರಿ ಇಲಾಖೆ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ವಿಚಕ್ಷಣಾ ದಳದ ನಿರೀಕ್ಷಕ ಚಂದ್ರಶೇಖರ್ ಎಸ್. ಉಪನಿರೀಕ್ಷಕ ಜಗನ್ನಾಥ್ ನಾಯ್ಕ್, ಸಿಬ್ಬಂದಿಗಳಾದ ಕೆ.ಎಸ್. ಉತ್ತಪ್ಪ ಹಾಗೂ
ಕೆ.ಎಸ್. ರಾಜ ಪಾಲ್ಗೊಂಡಿದ್ದರು.