ವೀರಾಜಪೇಟೆ, ಮಾ. 10: ಅಪರಾಧ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಿದ ವ್ಯಕ್ತಿಗೆ ಇಲಾಖೆಯ ವತಿಯಿಂದ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ನಗರದ ಪಂಜರುಪೇಟೆ ನಿವಾಸಿ ದಿವಂಗತ ಮೊಹಮ್ಮದ್ ಅವರ ಪುತ್ರ ಎಂ.ಎಂ. ಮುಸ್ತಫಗೆ ಡಾ. ಸುಮನ್ ಪನ್ನೇಕರ್ ಅವರು ಇಲಾಖೆ ವತಿಯಿಂದ ಪ್ರಶಂಸನಾ ಪತ್ರ ಮತ್ತು ರೂ. 5000 ನಗದು ನೀಡಿ ಗೌರವಿಸಿದರು.
ಇತ್ತೀಚೆಗೆ ನಡೆದ ಪಂಜರ್‍ಪೇಟೆ ಹೊಸ ಬಡವಾಣೆಯ ಎ.ಎಂ. ಶಫೀಕ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳÀನ್ನು ಹಿಡಿಯುವಲ್ಲಿ ಇಲಾಖೆಗೆ ಸಹಕಾರ ನೀಡಿದ್ದ ಹಿನ್ನೆಲೆ ಮುಸ್ತಫ ಅವರನ್ನು ಗೌರವಿಸಲಾಯಿತು.