ಸುಂಟಿಕೊಪ್ಪ, ಮಾ. 10: ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಮತಗಟ್ಟೆಯಲ್ಲಿ ಮತದಾರರ ಮಿಂಚಿನ ನೋಂದಣಿ ಮತ್ತು ತಿದ್ದುಪಡಿ ಹಾಗೂ ವರ್ಗಾವಣೆ ಪಕ್ರಿಯೆ ನಡೆಸಲಾಯಿತು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ವಿಭಾಗಗಳ ಮತಗಟ್ಟೆ (ಬಿಎಲ್‍ಓ) ಅಧಿಕಾರಿಗಳಾದ ಶ್ರೀನಿವಾಸ್, ಡಿ.ಎಂ. ಮಂಜುನಾಥ್, ಪುನೀತ್‍ಕುಮಾರ್, ಜೇಸಿ ಡಿಸೋಜ, ವಿಜಯ, ಶಾಂತಿ ನಜುಂಡ ಇವರುಗಳು ನೂತನ ಮತದಾರ ನೋಂದಾವಣೆ, ಗುರುತಿನ ಚೀಟಿಯಲ್ಲಿ ಲೋಪಗಳ ತಿದ್ದುಪಡಿ ಹಾಗೂ ವರ್ಗಾವಣೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿದರು. ಅಲ್ಲದೇ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಹಿತಿ ನೀಡಿದರು.