*ಗೋಣಿಕೊಪ್ಪಲು, ಮಾ. 9: ವನವಾಸಿ ಕಲ್ಯಾಣದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧ ಇಂದು ತಮ್ಮ ಮಾರುತಿ ವ್ಯಾನ್‍ನಲ್ಲಿ ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆನೆಚೌಕೂರು ಸಮೀಪ ಇಂದು ಬೆಳಗ್ಗೆ ಅಪಘಾತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು ಹುಣಸೂರು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ತಿತಿಮತಿ ರೇಷ್ಮೆಹಡ್ಲು ನಿವಾಸಿ ಸಿದ್ಧ ಅವರು ಚಾಲಿಸುತ್ತಿದ್ದ ವ್ಯಾನ್ ಮರಕ್ಕೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ಗಿರಿಜನ ಕಲ್ಯಾಣಕ್ಕಾಗಿ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ವಿವಿಧ ಹೋರಾಟದಲ್ಲೂ ಸಹ ತೊಡಗಿಸಿಕೊಂಡಿದ್ದರು. ಸಾಧು ಸಜ್ಜನಿಕೆಯ ವ್ಯಕ್ತಿಯಾಗಿದ್ದರು.