ನಿರ್ಮಾಣಕ್ಕೆ ಹೈಕೋರ್ಟ್ ಆದೇಶ

ಮಡಿಕೇರಿ, ಮಾ. 8: ಮತ್ತಿಗೋಡು ಆನೆ ಶಿಬಿರ ಮೂಲಕ ಹೋಗಲು ವೀರಾಜಪೇಟೆ - ಹುಣಸೂರು ರಸ್ತೆಯಲ್ಲಿ ರಸ್ತೆ ಉಬ್ಬು ನಿರ್ಮಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶಿಸಿದೆ.

ಬೆಂಗಳೂರಿನ ಹೆಚ್.ಸಿ. ಪ್ರಕಾಶ್ ಹಾಗೂ ಇತರರು ಈ ವಿಭಾಗದಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6ರವರೆಗೆ ವಾಹನ ನಿಷೇಧಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನಿನ್ನೆ ದಿನ ಈ ಬಗ್ಗೆ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶರು ಮತ್ತಿಗೋಡು ಆನೆ ಶಿಬಿರವಿರುವ 11 ಕಿ.ಮೀ. ದೂರದಲ್ಲಿ ಅಲ್ಲಲ್ಲಿ ರಸ್ತೆ ಉಬ್ಬುಗಳನ್ನು 10 ದಿನಗಳೊಳಗೆ ನಿರ್ಮಿಸುವಂತೆ ಮಧ್ಯಂತರ ತೀರ್ಪು ನೀಡಿ ಆದೇಶಿಸಿದರು. ಆದೇಶ ಪಾಲಿಸದಿದ್ದಲ್ಲಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗುವದೆಂದು ಕೊಡಗು ಹಾಗೂ ಹುಣಸೂರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದರು.