ಶನಿವಾರಸಂತೆ, ಮಾ. 7: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ 208 ಸೆಕ್ಟರ್ 8ರಲ್ಲಿ ಸಾರ್ವಜನಿಕರಿಗೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸೆಕ್ಟರ್ ಅಧಿಕಾರಿ ಶ್ರೀಕಾಂತ್, ಕಂದಾಯ ಇಲಾಖೆ ಅಧಿಕಾರಿ ನಂದಕುಮಾರ್, ಸಿಬ್ಬಂದಿ ಮಂಜುನಾಥ್, ಸಂತೋಷ್ ಅವರು ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಇತ್ಯಾದಿ ವಿದ್ಯುನ್ಮಾನ ಯಂತ್ರಗಳ ಪ್ರಾತ್ಯಕ್ಷಿಕೆ ಮೂಲಕ ಸಾರ್ವಜನಿಕರಿಂದ ಮತದಾನ ಮಾಡಿಸಿ ಜಾಗೃತಿ ಮೂಡಿಸಿದರು.

ಪಂಚಾಯಿತಿ ಸಿಬ್ಬಂದಿ ವಸಂತ್, ಫೌಜಿಯಾ, ಧರ್ಮ ಇತರರು ಹಾಜರಿದ್ದರು.