ಮಡಿಕೇರಿ, ಮಾ. 7: ಪ್ರತಿ ಯೊಬ್ಬರು ತಮ್ಮ ಜೀವನದಲ್ಲಿ ಮೊದಲನೆಯ ಶತು ್ರವಾಗಿರುವ ‘ಆಲಸ್ಯ’ವನ್ನು ತೊರೆದು; ಸದಾ ಕ್ರಿಯಾಶೀಲರಾಗಿದ್ದು, ರೋಗಮುಕ್ತ ಆರೋಗ್ಯಪೂರ್ಣ ಬದುಕು ಕಂಡುಕೊಳ್ಳುವದು ಸಾಧ್ಯವೆಂದು ಕೇರಳದ ಚಾಲ್‍ಕುಡಿಯ ಸ್ವಾಮಿ ಉದಿತ್‍ಚೈತನ್ಯ ಕರೆ ನೀಡಿದರು. ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಮಡಿಕೇರಿ ಘಟಕದಿಂದ; ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಯೋಗಾರೂಢನಾಗಿ ಉಪದೇಶಿಸಿ ರುವ ರೀತಿಯಲ್ಲಿ ಪ್ರತಿಯೊಬ್ಬರು ಬದುಕುವ ಕಲೆಯನ್ನು ಕಂಡು ಕೊಂಡರೆ; ವಿಷಕಾರಕ ಔಷಧಿಗಳಿಂದ ದೂರವಿದ್ದು, ಆಯುಷ್ಯ ಇರುವ ತನಕ ಸುಂದರ ಜೀವನ ಸಾಧಿಸಬಹುದು ಎಂದು ನೆನಪಿಸಿದ ಅವರು, ಅಂತಹ ರೋಗಗಳಿಗೆ ಮೂಲ ಆಲಸ್ಯವೆಂದು ಮಾರ್ನು ಡಿದರು.
ಯಾರೂ ನಿತ್ಯ ಉಷಾ ಕಾಲದಲ್ಲಿ ಸೂರ್ಯ ನಮಸ್ಕಾರದೊಂದಿಗೆ, ಯೋಗ- ವ್ಯಾಯಾಮ ಮಾಡು ವರೋ ಅವರು ದೀರ್ಘಾಯುಷ್ಯ ವಂತರಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗಿ ಬಾಳುವದು ಸಾಧ್ಯವೆಂದು ಉದಿತ್ ಚೈತನ್ಯ ವ್ಯಾಖ್ಯಾನಿಸಿದರು.
ಮನುಷ್ಯನಿಗೆ ಬಂಗಲೆ, ಹಣ, ಉದ್ಯೋಗ, ಸಂಪತ್ತು ಯಾವದೂ ಸುಖವನ್ನು ನೀಡಲು ಸಾಧ್ಯವಿಲ್ಲವೆಂದು ಉದಾಹರಿಸಿದ ಅವರು, ಶಾಂತ ಮನಸ್ಸಿನಿಂದ, ಸದಾ ಚಟುವಟಿಕೆಗಳಲ್ಲಿ ತೊಡಗಿರುವ ಹಸನ್ಮುಖಿಗಳು ಆನಂದಪೂರ್ಣ ಜೀವನ ಕಂಡುಕೊಳ್ಳಲಿದ್ದಾರೆ ಎಂದು ವಿಜ್ಞಾನ ಹೇಳುತ್ತಿದೆ ಎಂದು ಬೊಟ್ಟು ಮಾಡಿದರು.
ಮನೆಯಲ್ಲಿ ಹಿಂದಿನ ಗೃಹೋಪಯೋಗಿ ಕೆಲಸಗಳನ್ನು ಸ್ವಯಂ ಮಾನವನೇ ಅಥವಾ ಮಹಿಳೆ ನಿರ್ವಹಿಸುತ್ತಿದ್ದರೆ; ಇಂದಿನ ಯಾಂತ್ರೀಕೃತ ಜೀವನ, ಮೊಬೈಲ್‍ನಂತಹ ಉಪಕರಣಗಳಿಂದ ನೆಮ್ಮದಿಯೊಂದಿಗೆ ಆರೋಗ್ಯವನ್ನು ಕೆಡಿಸಿಕೊಳ್ಳುವಂತಾಗಿದೆ ಎಂದು ಅವರು ವಿಷಾದಿಸಿದರು.
ಇಂತಹ ಸನ್ನಿವೇಶದಲ್ಲಿ ನೂರು ವರ್ಷದ ಪರಿಪೂರ್ಣ ಜೀವನಕ್ಕೆ ಹಂಬಲಿಸದೆ; ಬಹುತೇಕ ಮಂದಿ ಅರ್ಧ ಆಯುಷ್ಯ ತಲಪುವಷ್ಟರಲ್ಲಿ ಎಲ್ಲವೂ ಸಾಕೆನಿಸಿ ತಮ್ಮ ಮಕ್ಕಳ ಎದುರು ಆಲಸ್ಯದ ಮಾತನಾಡುವದು ದುರಂತವೆಂದು ಮಾರ್ಮಿಕ ನುಡಿಯಾಡಿದರು. ಕೆ.ಎನ್.ಎಸ್.ಎಸ್. ಪದಾಧಿಕಾರಿಗಳಾದ ಕೆ.ಕೆ. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಕೀಲ ಶ್ರೀಧರನ್ ನಾಯರ್ ಸ್ವಾಗತಿಸಿದರು. ಸ್ವಾಮಿ ಉದಿತ್ ಚೈತನ್ಯ ಅವರನ್ನು ಈ ವೇಳೆ ಗೌರವಿಸುವ ದರೊಂದಿಗೆ, ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಶ್ರೀಜಾ ವಂದಿಸಿದರು.