ಮಡಿಕೇರಿ, ಮಾ. 8: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು 50 ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಅಮ್ಮತ್ತಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ವಿಜು ಸುಬ್ರಮಣಿ ನೆರವೇರಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಶಾಂತ ಪಿ.ಎಸ್. ಉಪಾಧ್ಯಕ್ಷ ಚೋವಂಡ ದಿತಿನ್ ನಾಚಪ್ಪ, ಸದಸ್ಯರಾದ ಪ್ರಶಾಂತ್ ಎನ್.ಎಸ್., ಚಂದ್ರಕಲಾ, ನಿತೀಶ್, ಬೊಮ್ಮಂಡ ತಾಯಮ್ಮ, ಪಿಡಿಒ ಮೇದಪ್ಪ ಎಂ.ಎಸ್. ಕಚೇರಿ ಸಿಬ್ಬಂದಿಯವರು ಮತ್ತು ಸಾರ್ವಜನಿಕರು ಹಾಜರಿದ್ದರು.