ಮಡಿಕೇ, ಮಾ. 7: ಮೈಸೂರಿನ ಬೆಳಗೊಳ ದಿಂದ ಕುಶಾಲನಗರದ ವರೆಗೆ ನಿರ್ಮಾಣ ಗೊಳ್ಳಲಿರುವ ರೈಲು ಮಾರ್ಗದಿಂದ ಕೊಡಗಿನ ಭೌಗೋಳಿಕ ನೆಲೆಗೆ, ಪರಿಸರಕ್ಕೆ ಯಾವದೇ ಹಾನಿಯುಂಟಾಗುವದಿಲ್ಲ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಸ್ಪಷ್ಟಪಡಿಸಿ ದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡು ತ್ತಿದ್ದ ಅವರು ಈ ಹಿಂದೆ ಮಡಿಕೇರಿವರೆಗೆ ಎಂದು ಯೋಜಿತ ವಾಗಿದ್ದ ರೈಲು ಮಾರ್ಗವನ್ನು ತಾನು ಕೊಡಗಿನ ಪರಿಸರಕ್ಕೆ ಯಾವದೇ ಧಕ್ಕೆಯಾಗ ಬಾರದೆನ್ನುವ ಉದ್ದೇಶದಿಂದ ಕುಶಾಲನಗರದವರೆಗೆ ಮಾತ್ರ ನಿರ್ಮಾಣಮಾಡಲು ರೈಲ್ವೇ ಸಚಿವ ಪೀಯೂಶ್ ಗೋಯಲ್ ಅವರಿಗೆ ಮನವಿ ಸಲ್ಲ್ಲಿಸಿದ್ದೆ. ಅದಕ್ಕೆ ಅವರು ಸ್ಪಂದಿಸಿ ಕುಶಾಲನಗರದವರೆಗೆ ಮಾತ್ರ ಮಂಜೂರಾತಿ ನೀಡಿದ್ದು ಕೇಂದ್ರ ಸರಕಾರದಿಂದ ರೂ. 1854.62 ಕೋಟಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು. ಮೈಸೂರಿನಿಂದ 85 ಕಿ.ಮೀ ಅಂತರದವರೆಗೆ ಕುಶಾಲನಗರಕ್ಕೆ ಈ ರೈಲು ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ರೈಲು ಮಾರ್ಗವು ಹುಣಸೂರು, ಪಿರಿಯಾಪಟ್ಟಣದ ಮೂಲಕ ಕುಶಾಲನಗರ ಸೇರುತ್ತದೆ. ಕುಶಾಲನಗರ ಸೇತುವೆಯಂದ ಕೇವಲ ಒಂದೂವರೆ ಕಿ.ಮೀ. ಅಂತರದವರೆಗೆ ನೂತನ ರೈಲು ಮಾರ್ಗ ನಿರ್ಮಾಣಗೊಂಡು ಅಲ್ಲಿಗೇ ಮುಕ್ತಾಯ ಗೊಳ್ಳುತ್ತದೆ ಎಂದು ಪ್ರತಾಪ್‍ಸಿಂಹ ಮಾಹಿತಿ ಯಿತ್ತರು. ಭೌಗೋಳಿ ಕವಾಗಿ ಕೊಡಗಿನ ಮಟ್ಟಿಗೆ ಕೇವಲ ಶೇ. 1ಳಿ ಪ್ರದೇಶದಷ್ಟು ಜಾಗ ಮಾತ್ರ ಈ ಯೋಜನೆಯಲ್ಲಿ ಬಳಸಲ್ಪಡುತ್ತದೆ. ಉಳಿದ ಶೇ. 98ಳಿ ಭಾಗ ಮೈಸೂರು ಜಿಲ್ಲೆಯ ಪ್ರದೇಶವನ್ನು ಒಳಗೊಳ್ಳುತ್ತದೆ ಎಂದು ವಿವರಿಸಿದರು.
ಈ ರೈಲು ಮಾರ್ಗಕ್ಕೆ ಅಗತ್ಯವಾದ ವಾಣಿಜ್ಯ ಮತ್ತು ತಾಂತ್ರಿಕ ಸಾಮಥ್ರ್ಯ ಗಳ ಬಗ್ಗೆ ಪೂರಕ ವರದಿಯೊಂದಿಗೆ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಅನುದಾನದ ಮೊತ್ತದಲ್ಲಿ ಸಿವಿಲ್ ಇಂಜಿನಿಯರಿಂಗ್ ಕಾಮಗಾರಿ ಗಾಗಿ ರೂ. 1723.78 ಕೋಟಿ, ವಿದ್ಯುತ್ ಕಾಮಗಾರಿ ಹಾಗೂ ಸಂಪರ್ಕಗಳಿಗಾಗಿ ರೂ.70.91 ಹಾಗೂ ಸಿಗ್ನಲ್ ಮತ್ತು ಟೆಲಿಗ್ರಾಫ್ ವ್ಯವಸ್ಥೆಗಾಗಿ ರೂ. 59.93 ಕೋಟಿಯನ್ನು ನಿಗದಿಪಡಿಸಲಾಗಿದೆ.
ರಾಜ್ಯದ 30 ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆ ಮಾತ್ರ ರೈಲು ಸಂಪರ್ಕದಿಂದ ವಂಚಿತವಾಗಿತ್ತು. ಇದೀಗ ಜಿಲ್ಲೆಯ ಈ ಕೊರತೆ ನೀಗಿದಂತಾಗಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.