ಮಡಿಕೇರಿ, ಮಾ. 7: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ಸಭೆ ಮಡಿಕೇರಿಯ ಸಮುದ್ರ ಹೊಟೇಲ್ನ ಸಭಾಂಗಣದಲ್ಲಿ ನಡೆಯಿತು. ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರವಿ ಗೌಡ, ಉಪಾಧ್ಯಕ್ಷರಾಗಿ ಅಜಿತ್ ಕೊಟ್ಟಕೇರಿಯನ, ಕಾರ್ಯದರ್ಶಿಯಾಗಿ ಮಿನಾಜ್ ಪ್ರವೀಣ್, ಸಹ ಕಾರ್ಯದರ್ಶಿಯಾಗಿ ಶಶಿ, ಖಜಾಂಚಿಯಾಗಿ ವಿಜೇಂದ್ರ ಕುಮಾರ್ ಎಂ., ಸಂಘಟನೆ ಕಾರ್ಯದರ್ಶಿಯಾಗಿ ಪ್ರದೀಪ್, ನಿರ್ದೇಶಕರುಗಳಾಗಿ ಶಿವರಾಂ, ಮೊಹಮ್ಮದ್, ಗಣೇಶ್ ರೈ, ಲಕ್ಷ್ಮಿ, ಪ್ರಸಾದ್ ಪೆರ್ಲ, ರವಿ ಕುಮಾರ್ ಹೆಚ್.ಎ., ಕೀರ್ತಿ, ಮಮ್ತಾಜ್ ಬೇಗಂ, ಶಶಿಕಲಾ ರೈ ಅವರುಗಳನ್ನು ನೇಮಕ ಮಾಡಲಾಯಿತು.
ವೇದಿಕೆಗೆ ಸಲಹೆಗಾರರಾಗಿ ರಶೀದ್ ಕೊರತ್ ಮತ್ತು ಮೈಕಲ್ ವೇಗಸ್ ಅವರನ್ನು ಆಯ್ಕೆ ಮಾಡಲಾಗಿದೆ.