ಮಡಿಕೇರಿ, ಮಾ. 7: ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಒಟ್ಟು 1,937 ಪ್ಯಾರಾ ಮೆಡಿಕಲ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಗಾಗಿ ಜೂನ್-2019ರ ಮಾಹೆಯಲ್ಲಿ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿ.ಬಿ.ಟಿ) ನೇಮಕಾತಿ ಪರೀಕ್ಷೆಯನ್ನು ನಡೆಸಲಿದ್ದಾರೆ. ಅರ್ಹ ಅಭ್ಯರ್ಥಿಗÀಳು ಆನ್‍ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಏಪ್ರಿಲ್ 2 ಕೊನೆಯ ದಿನವಾಗಿದೆ.
ಸ್ಟಾಪ್ ನರ್ಸ್, ಡೆಂಟಲ್ ಹೈಜಿನಿಸ್ಟ್, ಡಯಾಲಿಸಿಸ್ ಟೆಕ್ನಿಷೀಯನ್, ಎಕ್ಸ್‍ಟೆನ್ಸನ್ ಎಜುಕೇಟರ್, ಆರೋಗ್ಯ ಮತ್ತು ಮಲೇರಿಯಾ ಇನ್ಸ್‍ಪೆಕ್ಟರ್ ಗ್ರೇಡ್-3, ಲ್ಯಾಬ್ ಸೂಪರ್‍ಡೆಂಟ್ ಗ್ರೇಡ್-3, ಆಪ್ಟಾಮೀಟರಿಸ್ಟ್, ಫಿಸಿಯೋಥೆರಾಪಿಸ್ಟ್, ಫಾರ್ಮಸಿಸ್ಟ್ ಗ್ರೇಡ್ 3, ರೇಡಿಯೋ ಗ್ರಾಫರ್, ಸ್ಪೀಚ್ ಥೆರಾಫಿಸ್ಟ್, ಇಸಿಜಿ ಟೆಕ್ನಿಷೀಯನ್, ಲೇಡಿ ಹೆಲ್ತ್ ವಿಸಿಟರ್, ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ 2 (ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಪ್ರತಿ ಹುದ್ದೆವಾರು ವಯೋಮಿತಿಯ ವಿವರಗಳನ್ನು ಅಂತರ್ಜಾಲ ತಾಣದಿಂದ ಪಡೆಯುವುದು).
ವಯೋಮಿತಿ: ಅಭ್ಯರ್ಥಿಗಳು 18 ರಿಂದ 40 ವಯಸ್ಸಿನವರಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಹಾಗು ಒ.ಬಿ.ಸಿ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.(01-07-2019ಕ್ಕೆ) ಪರೀಕ್ಷಾ ಶುಲ್ಕ: ರೂ.500 (ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗ / ಮಹಿಳೆ / ಮಾಜಿ ಸೈನಿಕ/ಪಿ. ಡಬ್ಲ್ಯುಡಿ ಅಭ್ಯರ್ಥಿಗಳಿಗೆ ಶುಲ್ಕ ರೂ.250) ಪರೀಕ್ಷಾ ಶುಲ್ಕವನ್ನು ಆನ್‍ಲೈನ್ / ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವದೇ ಶಾಖೆಯಲ್ಲಿ ಚಲನ್ ಮುಖಾಂತರ/ ಯಾವುದೇ ಕಂಪ್ಯೂಟರೀಕೃತ ಅಂಚೆ ಕಚೇರಿ ಶಾಖೆಯ ಚಲನ್ ಮೂಲಕ ಸಂದಾಯ ಮಾಡುವದು. ಆನ್‍ಲೈನ್ ಅರ್ಜಿ ಸಲ್ಲಿಸಲು ಏಪ್ರಿಲ್ 7 ಕೊನೆಯ ದಿನವಾಗಿದೆ. ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವೆಬ್‍ಸೈಟ್: ತಿತಿತಿ.ಡಿಡಿbbಟಿಛಿ.gov.iಟಿ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.