ಮಡಿಕೇರಿ, ಮಾ. 8: ಇಲ್ಲಿನ ಮಹದೇವಪೇಟೆಯಲ್ಲಿ ನಿರ್ಮಾಣ ಗೊಂಡಿರುವ ನೂತನ ಮಾರುಕಟ್ಟೆಯು, ಹಿಂದಿನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಂದ ಕಳೆದ ಮಾರ್ಚ್‍ನಲ್ಲಿ ಉದ್ಘಾಟನೆ ಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಇಂದು ವ್ಯಾಪಾರಿಗಳಿಗೆ ವಹಿವಾಟು ನಡೆಸಲು ಅನುವು ಮಾಡಿ ಕೊಡಲಾಯಿತು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರು ಗಳಾದ ಹೆಚ್.ಎಂ. ನಂದಕುಮಾರ್, ಪೀಟರ್, ಉಸ್ಮಾನ್, ಉದಯ ಕುಮಾರ್, ತಜಸ್ಸುಂ ಮೊದಲಾದವರು ಹಾಜರಿದ್ದು, ರೈತ - ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು.ಯಾವದೇ ಗೊಂದಲಗಳಿಗೆ ಅವಕಾಶವಾಗದಂತೆ ಪೊಲೀಸರ ಉಪಸ್ಥಿತಿಯಲ್ಲಿ ಕಟ್ಟಡದ ನೆಲ ಮಳಿಗೆಗಳು ಹಾಗೂ ಮೊದಲನೆಯ ಅಂತಸ್ತಿನಲ್ಲಿ ನೂರಾರು ವ್ಯಾಪಾರಿಗಳು ಇಂದು ಸಂತೆಗೆ ಬಂದಿದ್ದ ಗ್ರಾಹಕರಿಗೆ ತಮ್ಮ ತಮ್ಮ ವಸ್ತುಗಳ ಮಾರಾಟನಿರv Àರಾಗಿದ್ದ ದೃಶ್ಯ ಕಂಡು ಬಂತು. ಕಳೆದ ಅನೇಕ ವರ್ಷಗಳಿಂದ ಮಾರುಕಟ್ಟೆ ವ್ಯಾಪಾರದಲ್ಲಿ ಬದುಕು ಕಟ್ಟಿ ಕೊಂಡವರಿಗೆ ವ್ಯವಸ್ಥೆ ಇಲ್ಲದೆ, ಗ್ರಾಮೀಣ ರೈತರು ಹಾಗೂ ಹಿರಿಯ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ ಎಂದು ಮಾರುಕಟ್ಟೆ ವರ್ತಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಆರೋಪಿಸಿದರು. ಅನೇಕ ಗ್ರಾಮೀಣ ರೈತರು ತಮ್ಮ ಸೊಪ್ಪು, ತರಕಾರಿಗಳ ಮಾರಾಟಕ್ಕೆ ಅವಕಾಶ ಇಲ್ಲದೆ, ಯಾರ್ಯಾರೋ ಇಲ್ಲಿ ಚಪ್ಪಲಿ ಸಹಿತ ಇತರ ವಸ್ತುಗಳ ಮಾರಾಟ ಮಾಡುತ್ತಿದ್ದಾರೆಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಸರಿಪಡಿಸುವ ಭರವಸೆ : ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಪ್ರತಿಕ್ರಿಯಿಸಿ, ಈಗಷ್ಟೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೆ ಸೂಕ್ತ ಸ್ಥಳಾವಕಾಶ ದೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸುವತ್ತ ಗಮನ ಹರಿಸಲಾಗವದು ಎಂದು ಭರವಸೆ ನೀಡಿದರು. ಮಳೆಯಲ್ಲಿ ಖಂಡಿತಾ ಈಗಿನ ಪರಿಸ್ಥಿತಿಯಲ್ಲಿ ಈ ಕಟ್ಟಡದೊಳಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲವೆಂದು ವರ್ತಕರಾದ ಸಮ್ಮದ್, ರವಿ, ದೇವಯ್ಯ ಮೊದಲಾದವರು ಅಸಮಾಧಾನ ತೋಡಿಕೊಂಡರಲ್ಲದೆ, ಕೆಲವರು ಜಾಗ ನೀಡಲು ಹಣ ವಸೂಲಿಯೊಂದಿಗೆ ಗೂಂಡಾಗಿರಿ ನಡೆಸುತ್ತಿರುವರೆಂದು ಗಂಭೀರವಾಗಿ ಆರೋಪಿಸಿದರು. ಇಂತಹ ಸಮಸ್ಯೆಗಳನ್ನು ತಾವು ಖುದ್ದು ವೀಕ್ಷಿಸಿದ್ದು, ಮುಂದೆ ಸಾಧ್ಯವಿರುವ ಮಟ್ಟಿಗೆ ಸುಧಾರಣಾ ಕ್ರಮ ಕೈಗೊಂಡು, ವರ್ತಕರಿಗೆ ಸೀಮಿತ ಸ್ಥಳಗಳನ್ನು ಪ್ರತ್ಯೇಕ ಗುರುತಿಸಿಕೊಟ್ಟು ಗೊಂದಲಗಳನ್ನು ಸರಿಪಡಿಸ ಲಾಗುವದು ಎಂದು ನಗರಸಭಾ ಆಯುಕ್ತ ರಮೇಶ್ ಆಶ್ವಾಸನೆ ನೀಡಿದರು.