ಚೆಟ್ಟಳ್ಳಿ, ಮಾ. 7: ಚೆಟ್ಟಳ್ಳಿ ಪಶು ಆರೋಗ್ಯ ಕೇಂದ್ರದಲ್ಲಿ ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ, ಚೇರಳ ಶ್ರೀಮಂಗಲ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ 20 ಫಲಾನುಭವಿಗಳಿಗೆ ಜಿಲ್ಲಾ ಪಂಚಾಯಿತಿ ಅನುದಾನದ ಕೋಳಿ ಮರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಪಶು ವೈದ್ಯಾಧಿಕಾರಿಗಳಾದ ಡಾ. ಸಂಜೀವ ಆರ್. ಸಿಂಧೆ ಮಾತನಾಡಿ, ಇಲಾಖೆಯ ಹಲವು ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದರು. ಈ ಸಂದರ್ಭ ಗ್ರಾ.ಪಂ. ಮಾಜಿ ಅಧ್ಯಕ್ಷ ಮುಳ್ಳಂಡ ಸನ್ನಿ ಅಯ್ಯಪ್ಪ, ಸದಸ್ಯೆ ಸಿಂಧೂ, ಮಾಹಿದೀನ್ ಮತ್ತಿತರರು ಹಾಜರಿದ್ದರು.