ಗುಡ್ಡೆಹೊಸೂರು, ಮಾ. 5: ಗುಡ್ಡೆಹೊಸೂರಿನ ಹಿತರಕ್ಷಣಾ ಯೂತ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಈ ಪಂದ್ಯಾಟದಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಹೊನಲು ಬೆಳಕಿನ ವಾಲಿಬಾಲ್ ಪಂದ್ಯಗಳು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಕೆ.ಸಿ. ಸತ್ಯ, ಎಂ.ಆರ್. ಉತ್ತಪ್ಪ, ಬಿ.ಟಿ. ಪ್ರಸನ್ನ, ಹೊಟೇಲ್ ಉದ್ಯಮಿಗಳಾದ ಸಮೀರ್, ಕುಡೆಕ್ಕಲ್ ನಿತ್ಯ ಹಾಜರಿದ್ದರು.
ಕ್ಲಬ್ ಅಧ್ಯಕ್ಷ ಶಶಿಕುಮಾರ್, ಕಾರ್ಯದರ್ಶಿ ಅಭಿರಂಗ ಮತ್ತು ಕ್ಲಬ್‍ನ ಸದಸ್ಯರು ಹಾಜರಿದ್ದರು. ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಿ.ಬಿ. ಭಾರತೀಶ್ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು. ಥ್ರೋಬಾಲ್‍ನಲ್ಲಿ ಪ್ರಥಮ ಬಹುಮಾನವನ್ನು ಮಡಿಕೇರಿ ತಂಡ ಪಡೆದರೆ ದ್ವಿತೀಯ ಬಹುಮಾನವನ್ನು ಕೂರ್ಗಗಲ್ಸ್ ನಂಜರಾಯಪಟ್ಟಣ. ವಾಲಿಬಾಲ್‍ನಲ್ಲಿ ಪ್ರಥಮ ಕೆ.ವೈ.ಸಿ. ಬಸವನಹಳ್ಳಿ ತಂಡ ಪ್ರಥಮ, ಅಲಾಲ್‍ಫ್ರೆಂಡ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಪಂದ್ಯಾಟದ ವೀಕ್ಷಕ ವಿವರಣೆಯನ್ನು ಬಸವನಹಳ್ಳಿ ಶಾಲಾ ದೈಹಿಕ ಶಿಕ್ಷಕರಾದ ಲಕ್ಷ್ಮಣ ಮತ್ತು ಮಧು ಹಾಗೂ ಬಿ.ವಿ. ಸಂತೋಷ್, ತಮ್ಮಯ್ಯ ನೀಡಿದರು.