ಮಡಿಕೇರಿ, ಮಾ. 6: ಕೊಡಗನ್ನು ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿ ಮಾಡುವ ವಿಕಾಸ ಜನಸೇವಾ ಟ್ರಸ್ಟ್‍ನ ಅಭಿಯಾನ ಮುಂದುವರೆದಿದ್ದು, ಸೋಮವಾರಪೇಟೆಯ ಜನತಾ ಕಾಲೋನಿಯ ಕಿರಣ್ ಡಿಸೋಜ ಎಂಬವರನ್ನು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬೆಂಗಳೂರು ಬನ್ನೇರುಘಟ್ಟದ ಆರ್‍ವಿಎಂ ಆಸ್ಪತ್ರೆಗೆ ಚಿಕಿತ್ಸೆಗೆಂದು ಸಂಘಟನೆಯ ಪ್ರಮುಖರು ದಾಖಲಿಸಿದ್ದಾರೆ.
ಕಿರಣ್ ಡಿಸೋಜ ಅವರ ತಾಯಿ ಲೂಸಿ ಡಿಸೋಜ ಅವರ ಒಪ್ಪಿಗೆ ಮೇರೆಗೆ ಸೋಮವಾರಪೇಟೆ ಆಸ್ಪತ್ರೆಯ ಸಹಕಾರದೊಂದಿಗೆ ಟ್ರಸ್ಟ್ ಸಿಬ್ಬಂದಿಗಳಾದ ಗಾಯನ ಶಿವು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ದೀಪಕ್ ಹಾಗೂ ತಾವು ಆರ್‍ವಿಎಂ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಮಾನಸಿಕ ಅಸ್ವಸ್ಥರಾಗಿದ್ದ ಕಿರಣ್ ಡಿಸೋಜ ಅವರಿಂದ ಸಾರ್ವಜನಿಕವಾಗಿ ಅಡ್ಡಿಯಾಗುತ್ತಿದ್ದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಟ್ರಸ್ಟ್ ಕ್ರಮ ಕೈಗೊಂಡಿತು ಎಂದು ತಿಳಿಸಿರುವ ಅವರು ಅಭಿಯಾನ ಮುಂದುವರೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಹೆಚ್.ಕೆ. ರಮೇಶ್ ತಿಳಿಸಿದ್ದಾರೆ.