ಶನಿವಾರಸಂತೆ, ಮಾ. 5: ದುಂಡಳ್ಳಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ವಿವಿಧ ಆದಾಯ ಮೂಲದ ಹರಾಜು ಪ್ರಕ್ರಿಯೆ ಟೆಂಡರ್‍ದಾರರ ಸಮ್ಮುಖದಲ್ಲಿ ಕರೆಯಲಾಗಿದ್ದು, ಟೆಂಡರ್ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು.
ಕಳೆದ ಸಾಲಿನಲ್ಲಿ ಹಸಿಮೀನು ಮಾರುಕಟ್ಟೆ ಟೆಂಡರ್ ಹರಾಜಿನಲ್ಲಿ ರೂ. 65,000 ಸಾವಿರಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 1,01,100 ಲಕ್ಷಕ್ಕೆ ಹರಾಜಾಗಿದ್ದು, ಪಂಚಾಯಿತಿಗೆ ರೂ. 36,100 ಅಧಿಕ ಲಾಭ ಬಂದಿದೆ. ಬಾಕಿ ಉಳಿದ ಕುರಿಮಾಂಸ ಮಳಿಗೆ ಹಾಗೂ ಹಂದಿಮಾಂಸ ಮಳಿಗೆಯನ್ನು ಕಾರಣಾಂತರಿಂದ ಮುಂದೂಡಲಾಗಿದೆ.
ಟೆಂಡರ್‍ದಾರರ ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೂಪಾ ಪುಟ್ಟರಾಜ್, ಸದಸ್ಯರುಗಳಾದ ಎನ್.ಕೆ. ಸುಮತಿ ಸತೀಶ್, ಮನು ಹರೀಶ್, ನೇತ್ರಾವತಿ ನಂಜುಂಡಸ್ವಾಮಿ, ಬಿ.ಎಂ. ಪಾರ್ವತಿ ಮಂಜುನಾಥ, ಕಮಲಮ್ಮ ಮಂಜಪ್ಪನಾಯ್ಕ, ಬಿಂದಮ್ಮ ಲಕ್ಕಯ್ಯ, ಎ.ಆರ್. ರಕ್ಷಿತ, ಎಂ.ಸಿ. ಸಂತೋಷ, ಡಿ.ಎಲ್. ಯೋಗೇಂದ್ರ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸ್ವಾಗತಿಸಿ ಕಾರ್ಯದರ್ಶಿ ವೇಣುಗೋಪಾಲ್ ವಂದಿಸಿದರು.