ವೀರಾಜಪೇಟೆ, ಮಾ. 6: ಇತಿಹಾಸವನ್ನು ಅಧ್ಯಯನ ಮಾಡುವದರಿಂದ ನಮ್ಮಲ್ಲಿರುವ ತಪ್ಪು ಗ್ರಹಿಕೆಯನ್ನು ಸರಿಪಡಿಸಿಕೊಳ್ಳಬಹುದು ಎಂದು ಅರಮೇರಿ ಕಳಂಚೇರಿ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅರಮೇರಿಯ ಕಳಂಚೇರಿ ಮಠದಲ್ಲಿ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಶಿಶಿಲ ಅವರ ದೊಡ್ಡ ವೀರರಾಜೇಂದ್ರ ಎಂಬ ಐತಿಹಾಸಿಕ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಗತ್ತಿನ ಇತಿಹಾಸ ತಿಳಿದುಕೊಳ್ಳು ವದಕ್ಕಿಂತ ಮೊದಲು ತನ್ನ ಪರಿಸರದ ಇತಿಹಾಸದ ಅರಿವನ್ನು ಪಡೆದು ಕೊಳ್ಳಬೇಕು. ದೊಡ್ಡ ವೀರರಾಜೇಂದ್ರ ನನ್ನು ರಾಜನನ್ನಾಗಿ ಮಾಡುವಲ್ಲಿ ಕೊಡವ ಸಮುದಾಯದ ಶ್ರಮವನ್ನು ನಾವು ಗಮನಿಸಬೇಕು. ಪರರನ್ನು ಮೆಚ್ಚಿಸಲು ಇತಿಹಾಸವನ್ನು ಬರೆಯುವದು ಸರಿಯಲ್ಲ. ಪ್ರತಿಯೊಬ್ಬರು ಅಧ್ಯಯನ ಶೀಲರಾಗುವದರಿಂದ ಪುಸ್ತಕದಂತಹ ಸನ್ಮಿತ್ರ ದೊರೆಯುತ್ತಾನೆ ಎಂದರು.

ಸಾಹಿತಿ ಕೃತಿಯ ಕರ್ತೃ ಡಾ. ಪ್ರಭಾಕರ ಶಿಶಿಲ ಮಾತನಾಡಿ, ಕೊಡಗನ್ನು ಪರರ ತುತ್ತಾಗದಂತೆ ಕಾಪಾಡಿ ಕಟ್ಟುವಲ್ಲಿ ದೊಡ್ಡ ವೀರರಾಜೇಂದ್ರನ ಶ್ರಮವಿದೆ. ಕೊಡಗಿನ ಕುರಿತು ಇನ್ನೆರಡು ಪುಸ್ತಕವನ್ನು ಬರೆಯುವ ಸಿದ್ಧತೆಯಲ್ಲಿ ತೊಡಗಿಸಿ ಕೊಳ್ಳಲಾಗಿದೆ. ದೊಡ್ಡ ವೀರರಾಜೇಂದ್ರ ಕೃತಿಯ ಪ್ರತಿಗಳ ಮಾರಾಟದಿಂದ ಬಂದ ಹಣವನ್ನು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೀಡುವದಾಗಿ ಅವರು ಘೋಷಿಸಿದರು.

ನಿವೃತ್ತ ಪ್ರಾಧ್ಯಾಪಕ ಸಿ.ಕೆ. ರೇಣುಕಚಾರ್ಯ ಮಾತನಾಡಿ ಬೇರೆ ಬೇರೆ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಪುಸ್ತಕಗಳ ಅವಶ್ಯಕತೆ ಸಾಕಷ್ಟಿದೆ. ಇತಿಹಾಸದ ಅರಿವು ಎಲ್ಲರಿಗೂ ಬಹುಮುಖ್ಯವಾಗಿದೆ ಎಂದರು. ಪ್ರಾಧ್ಯಾಪಕ ಮೋಹನ್ ಪಾಳೆಗಾರ್ ದೊಡ್ಡ ವೀರರಾಜೇಂದ್ರ ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಇಟ್ಟಿರ ಬಿದ್ದಪ್ಪ, ಪಕ್ಷಿ ತಜ್ಞ ಡಾ. ನರಸಿಂಹನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮಧೋಶ್ ಪೂವಯ್ಯ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಬ್ರಾಯ ಸಂಪಾಜೆ, ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಟಿ.ಕೆ. ಬೋಪಯ್ಯ, ಪೆÇ್ರ. ಕಮಲಾಕ್ಷಿ, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ ಮತ್ತಿತರು ಉಪಸ್ಥಿತರಿದ್ದರು. ಉಪನ್ಯಾಸಕಿ ಸಿಂಧು ಸ್ವಾಗತಿಸಿ, ವಂದಿಸಿದರು.