ಕುಶಾಲನಗರ, ಮಾ. 5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಎ. ಯೋಗೀಶ್ ಅವರಿಗೆ ಜರ್ಮನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಯೋಗೀಶ್ ಅವರಿಗೆ ಸಮಾಜ ಸೇವೆಗಾಗಿ ಜರ್ಮನಿಯ ಇಂಟರ್‍ನ್ಯಾಷನಲ್ ಪೀಸ್ ಯೂನಿವರ್ಸಿಟಿ ಈ ಗೌರವ ನೀಡಿದ್ದು ಇತ್ತೀಚೆಗೆ ತಮಿಳುನಾಡು ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. 1996 ರಲ್ಲಿ ಯೋಜನೆಯಲ್ಲಿ ತೊಡಗಿಸಿಕೊಂಡ ಯೋಗೀಶ್ 2013 ರಿಂದ ಜಿಲ್ಲೆಯ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.