ನಾಪೆÉÇೀಕ್ಲು, ಮಾ. 5: ಕೊಡಗಿನ ಜೀವನದಿ ಕಾವೇರಿ ಕಲುಷಿತಗೊಂಡಿದ್ದು ಹೊಳೆಯಲ್ಲಿ ಸತ್ತ ಕೋಳಿಗಳು ಕಂಡು ಬಂದಿದ್ದು ನಾಪೆÉÇೀಕ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ ಅವರು ಕಾರ್ಮಿಕರನ್ನು ಕರೆದೊಯ್ದು ನದಿಯಲ್ಲಿದ್ದ ತ್ಯಾಜ್ಯವನ್ನು ತೆರವು ಮಾಡಿ ಸ್ವಚ್ಛ ಮಾಡುವದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಸಮೀಪದ ಕೊಟ್ಟಮುಡಿ ಸೇತುವೆ ಕೆಳಬದಿಯಲ್ಲಿ ಸತ್ತ ಇಡೀ ಕೋಳಿಗಳು ಮತ್ತು ಕಬ್ಬಿನ ತ್ಯಾಜ್ಯಗಳು ಇರುವದನ್ನು ಮನಗಂಡ ಉಪಾಧ್ಯಕ್ಷರು ಕೂಡಲೇ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಹೊಳೆಯಲ್ಲಿನ ತ್ಯಾಜ್ಯವನ್ನು ತೆಗೆಸಿದರು. ಹೊಳೆ ಬದಿಯಲ್ಲಿದ್ದ ಕಸದ ರಾಶಿಯನ್ನು ಗುಂಡಿ ತೆಗೆಸಿ ಕಸವನ್ನು ಹಾಕಿ ಮುಚ್ಚಿಸಿದರು.

ಕಾವೇರಿ ಹೊಳೆ ಕಲುಷಿತ ವಾಗುತ್ತಿರುವ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. -ದುಗ್ಗಳ