ಆಲೂರು-ಸಿದ್ದಾಪುರ, ಮಾ. 5: ಶನಿವಾರಸಂತೆ ಸರ್ಕಾರಿ ಪ್ರಾಥಮಿಕ ಶಾಲೆÉ ಶತಮಾನ ಕಂಡ ಶಾಲೆ ಯಾಗಿದ್ದು ಈ ಶಾಲೆ ಶನಿವಾರಸಂತೆ ಸೋಮವಾರಪೇಟೆ ಮುಖ್ಯ ರಸ್ತೆಗೆ ಹೊಂದಿಕೊಂಡಂತಿದೆ. ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಅನೇಕ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಹಿಂದೆ ಶಾಲಾ ಕಟ್ಟಡ ದುಸ್ಥಿತಿಯಲ್ಲಿರುವ ವರದಿ ಮಾಡಿದ ತಕ್ಷಣ ಎಚ್ಚೆತ್ತುಕೊಂಡು ಸಂಬಂಧಪಟ್ಟ ಇಲಾಖೆ ಒಂದಷ್ಟು ದುರಸ್ತಿ ಕಾರ್ಯವನ್ನು ಮಾಡಿ ಮುಗಿಸಿದರು. ಆದರೆ ಪ್ರಮುಖವಾಗಿ ಬೇಕಾದಂತಹ ತಡೆಗೋಡೆ ಈ ಹಿಂದೆ ಮಳೆಗೆ ಕುಸಿದಿದ್ದು ಇದೀಗ ಬಿರುಕು ಬಿಟ್ಟು ಇಂದೊ ನಾಳೆಯೋ ಮುಖ್ಯ ರಸ್ತೆಗೆ ಬೀಳುವ ಸಾದ್ಯತೆ ಹೆಚ್ಚಿದೆ. ಇಲ್ಲಿಯ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಈ ಬೀಳುವ ಹಂತದಲ್ಲಿರುವ ತಡೆ ಗೋಡೆಯ ಸಮೀಪವೆ ಓಡಾಡುವ ದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿದ್ದು ಸಂಬಂಧಪಟ್ಟವರು ಮಾತ್ರ ಯಾವದೇ ಕ್ರಮಕ್ಕೆ ಮುಂದಾಗದಿ ರುವದು ವಿಪರ್ಯಾಸ. ಇದೀಗ ಆ ತಡೆ ಗೋಡೆಯ ಸಮೀಪದಲ್ಲೇ ಒಳ ಬಾಗದಲ್ಲಿ ದೊಡ್ಡದಾದ ಹೊಂಡ ವೊಂದು ನಿರ್ಮಾಣವಾಗಿದೆ ಇಲ್ಲಿಯ ವಿದ್ಯಾರ್ಥಿಗಳು ಆಟವಾಡುತ್ತ ಈ ಹೊಂಡದೊಳಗೆ ಕಾಲು ಜಾರಿ ಬೀಳುವದು ಸರ್ವೆ ಸಾಮಾನ್ಯವಾಗಿದೆ ಅಷ್ಟಿದ್ದರೂ ಸಹ ಈ ಬಗ್ಗೆ ಸಂಬಂಧಪಟ್ಟವರು ಇನ್ನು ಗಮನ ಹರಿಸುತ್ತಿಲ್ಲ, ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲದಿದ್ದರು ಇನ್ನುಳಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಸರಿ ಇದ್ದರೂ ಸಹ ಶಾಲೆಯ ಹೊರ ಭಾಗದ ತಡೆಗೋಡೆಯನ್ನು ನೋಡಿಯೇ ಅನೇಕ ಇಲ್ಲಿಯ ಮಕ್ಕಳ ಪೋಷಕರುಗಳು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಈ ಶಾಲೆಗೆ ಹೊಂದಿ ಕೊಂಡಂತಿರುವ ಬಿರುಕು ಬಿಟ್ಟಿರುವ ಶೌಚಾಲಯ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಹಾಗೂ ದೊಡ್ಡದಾದ ಹೊಂಡ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತಡೆಗೊಡೆ ಇಂತಹ ಇನ್ನಿತರ ಸಮಸ್ಯೆಗಳಿಂದ ಈ ಸರ್ಕಾರಿ ಶಾಲೆ ನರಳುತ್ತಿದ್ದು ತಕ್ಷಣ ಈ ಸಮಸ್ಯೆಗಳನ್ನು ಸರಿಪಡಿಸಿದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಶತಮಾನ ದಾಟಿದ ಇಂತಹ ಸರ್ಕಾರಿ ಶಾಲೆಗೆ ಮಕ್ಕಳು ದಾಖಲಾಗುತ್ತಾರೆ ಇಲ್ಲವಾದಲ್ಲಿ ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆ ಹೆಚ್ಚಿದೆ.
- ದಿನೇಶ್ ಮಾಲಂಬಿ