*ಸಿದ್ದಾಪುರ, ಮಾ. 5: ಚೆನ್ನಯ್ಯನಕೋಟೆ ತಾಲೂಕು ಪಂಚಾಯಿತಿ ಸದಸ್ಯೆ ಕುಲ್ಲಚೆಟ್ಟಿ ಕಾವೇರಮ್ಮ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಚೆನ್ನಂಗಿ ಮೂಡಬಯಲು ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ತಡೆಗೋಡೆಗೆ ರೂ. 50 ಸಾವಿರ, ದಿಡ್ಡಳ್ಳಿ ಗುಡ್ಲೂರು ರಸ್ತೆ ದುರಸ್ತಿಗೆ ರೂ. 80 ಸಾವಿರ, ಮಾಲ್ದಾರೆ ಅಂಚೆತಿಟ್ಟು ಚಂದನ ಮತ್ತು ಸೋಮ ಎಂಬವರ ಮನೆಗೆ ರೂ. 90 ಸಾವಿರ, ಚೆನ್ನಯ್ಯನಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೇಲ್ಚಾವಣಿ ದುರಸ್ತಿಗೆ ರೂ. 50 ಸಾವಿರ, ಚೆನ್ನಯ್ಯನಕೋಟೆ ಜಲಕಟ್ಟೆ ಜಾನಕಿ ಎಂಬವರ ಮನೆಯ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರೂ. 70 ಸಾವಿರ, ಗುಡ್ಲೂರು ಸಮುದಾಯ ಭವನ ರಸ್ತೆ ದುರಸ್ತಿಗೆ ರೂ. 90 ಸಾವಿರ, ಚೆನ್ನಂಗಿ ಗುಡ್ಲೂರು ಪ್ರಾಥಮಿಕ ಶಾಲೆ ದುರಸ್ತಿಗೆ ರೂ. 50 ಸಾವಿರ, ಚೆನ್ನಂಗಿ ಶಾಲೆ ಟೈಲ್ಸ್ ಅಳವಡಿಕೆಗೆ ರೂ. 40 ಸಾವಿರ ಬಿಡುಗಡೆಗೊಳಿಸಲಾಗಿದೆ ಎಂದು ಸದಸ್ಯೆ ಕುಲ್ಲಚೆಟ್ಟಿ ಕಾವೇರಮ್ಮ ತಿಳಿಸಿದ್ದಾರೆ.
ಭೂಮಿ ಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಕುಲ್ಲಚೆಟ್ಟಿ ಕಾವೇರಮ್ಮ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಧ್ಯಕ್ಷ ಪೊನ್ನಚನ ಯತೀಶ್, ಉಪಾಧ್ಯಕ್ಷೆ ಗಾಯತ್ರಿ ಯತೀಶ್, ಬೆಳೆಗಾರರಾದ ವಾಟೆರೀರ ಸುರೇಶ್, ಬಿ.ಎಸ್. ಗಣಪತಿ, ಹೇಮಂತ್ (ಕಿರಣ್) ಗುತ್ತಿಗೆದಾರ ಟಿ.ಹೆಚ್. ಮಂಜುನಾಥ್ ಉಪಸ್ಥಿತರಿದ್ದರು.