ಕುಶಾಲನಗರ, ಮಾ. 6: ಜಿಲ್ಲೆಯ ಅರೆಕಾಡು ನಿವಾಸಿ ಕೆ.ಪಿ. ದೀಕ್ಷಿತ್‍ಕುಮಾರ್ 2018-19ನೇ ಸಾಲಿನ ಸಬ್ ಇನ್ಸ್‍ಪೆಕ್ಟರ್ ಆಫ್ ಪೊಲೀಸ್ ತರಬೇತಿಯ ಒಳಂಗಾಣ ಚಟುವಟಿಕೆಯಲ್ಲಿ ಪ್ರಥಮ ಸ್ಥಾನಗಳಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಗೃಹಮಂತ್ರಿ ಎಂ.ಬಿ. ಪಾಟೀಲ್ ಅವರಿಗೆ ಪ್ರಶಸ್ತಿ ವಿತರಿಸಿದರು. ದೀಕ್ಷಿತ್‍ಕುಮಾರ್ ಅರೆಕಾಡು ನಿವಾಸಿಗಳಾದ ಕೆ.ಎನ್. ಪ್ರಭಾಕರನ್ ಮತ್ತು ಕೆ.ಪಿ. ಗೀತಾ ದಂಪತಿಗಳ ಪುತ್ರ.