ಚೆಟ್ಟಳ್ಳಿ, ಮಾ. 6: ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಜಮಾಅತ್ ಕಮಿಟಿ ವತಿಯಿಂದ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎ. ಯಾಕೂಬ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕಮಿಟಿ ಅಧ್ಯಕ್ಷ ಆಲಿ ಉಸ್ತಾದ್, ಕಾರ್ಯದರ್ಶಿ ಗಫೂರ್ ಸಾಹೇಬ್, ಖಜಾಂಚಿ ಹನೀಫ್ ಮುಸ್ಲಿಯಾರ್, ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ಮಹಲ್ ಖತೀಬ, ಮುಸ್ತಫಾ ಸಖಾಫಿ ಇದ್ದರು.