ನಾಪೋಕ್ಲು, ಮಾ. 2: ಇಲ್ಲಿಗೆ ಸಮೀಪದ ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಆಚರಿಸಲಾಗುವದು. ತಾ.4ರಂದು ವಿವಿಧ ಪೂಜಾ ವಿಧಿವಿಧಾನಗಳು ದೇವಾಲಯದಲ್ಲಿ ಜರುಗಲಿದೆ. ಸಂಜೆ ಶಿವರಾತ್ರಿ ಹಬ್ಬದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.