ಸುಂಟಿಕೊಪ್ಪ, ಮಾ. 1: ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಕೇಂದ್ರ ಬಿಜೆಪಿಯ ಕರೆಯ ಮೇರೆಗೆ ಮಹಾ ಸಂಪರ್ಕ ದಿನವನ್ನು ಆಚರಿಸಲಾಯಿತು.
ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮನವರಿಕೆ ಮಾಡುವ ಮೂಲಕ ಕೇಂದ್ರದ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮೊದಲು ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರ ಮನೆಯ ಮುಂಭಾಗದಲ್ಲಿ ಪಕ್ಷದ ಬಾವುಟವನ್ನು ಹಾರಿಸುವದರ ಮೂಲಕ ‘ನಮ್ಮ ಪರಿವಾರ ಬಿಜೆಪಿ ಪರಿವಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಓಡಿಯಪ್ಪನ ಸುದೇಶ, ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ನಗರ ಯುವ ಮೋರ್ಚಾ ಅಧ್ಯಕ್ಷ ರಂಜಿತ್ ಪೂಜಾರಿ, ಕಾರ್ಯಕರ್ತರಾದ ವಾಸು, ಪುನೀತ್ ಪೂಜಾರಿ, ಮಂಜುನಾಥ, ರುಕ್ಮಿನಿ, ನಾಗೇಶ್ ಪೂಜಾರಿ ಇತರರು ಇದ್ದರು.