ಮಡಿಕೇರಿ, ಮಾ. 1: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ-ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿದ್ದ ನಾಲ್ವರು ಎನ್‍ಸಿಸಿ ಕೆಡೆಟ್‍ಗಳನ್ನು 19 ಕರ್ನಾಟಕ ಬೆಟಾಲಿಯನ್ ವತಿಯಿಂದ ಮೆರವಣಿಗೆ ನಡೆಸಿ ಸನ್ಮಾನಿಸಲಾಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ ಬಿ.ಎಸ್., ದ್ವಿತೀಯ ಬಿಕಾಂ, ಪೊನ್ನಣ್ಣ ಎನ್.ಎನ್., ದ್ವಿತೀಯ ಬಿಎ ಇಜೆಎಸ್, ಕೊಡಗು ವಿದ್ಯಾಲಯದ ದೇವಯಾನ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರೀತಿ ಇವರನ್ನು ತೆರೆದ ವಾಹನದ ಮೂಲಕ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತ ಬಳಸಿ ಎಸ್‍ಪಿ ಕಚೇರಿ ಬಳಿಯಿರುವ ಎನ್‍ಸಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಕಳೆದ ಹದಿನೈದು ವರ್ಷಗಳ ನಂತರ ದೇಶದ ಎಲ್ಲಾ ಬೆಟಾಲಿಯನ್‍ಗಳ ಪೈಕಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಈ ವರ್ಷ ಕರ್ನಾಟಕ-ಗೋವಾ ಡೈರೆಕ್ಟರೇಟ್ ಪ್ರಥಮ ಸ್ಥಾನಗಳಿಸಿರುತ್ತದೆ. ಪೊನ್ನಣ್ಣ ಎನ್.ಎನ್., ತೇಜಸ್ ಬಿ.ಎಸ್., ದ್ವಿತೀಯ ಬಿಕಾಂ, ವಿವೇಕಾನಂದ ಕಾಲೇಜಿನ ಪ್ರೀತಿ, ಕೊಡಗು ವಿದ್ಯಾಲಯದ ದೇವಯಾನ ಭಾಗವಹಿಸಿದ್ದರು. ಈ ಸಂದರ್ಭ ಕರ್ನಲ್ ವಿಎಂ ನಾಯಕ್, ಲೆಫ್ಟಿನೆಂಟ್ ಕರ್ನಲ್ ಸಂಜಯ್ ಆಪ್ಟೆ, ಮೇಜರ್ ಡಾ. ರಾಘವ್ ಬಿ, ಸುಬೇದಾರ್ ಮೇಜರ್ ರಾಜೇಶ್, ಸುಬೇದಾರ್ ರಮೇಶ್, ಲೆಫ್ಟಿನೆಂಟ್ ಕಾವೇರಪ್ಪ, ಕೊಡಗು ವಿದ್ಯಾಲಯದ ದಾಮೋದರ, ಮೂರ್ನಾಡು ಹೈಸ್ಕೂಲಿನ ಗಣೇಶ್ ಹಾಗೂ ಪುತ್ತೂರು, ಮೂರ್ನಾಡು, ಸುಳ್ಯದ ಎನ್‍ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದರು.