ಮಡಿಕೇರಿ ಮಾ.1 : ಕೂರ್ಗ್ ಹೋಮ್ ಮೇಡ್ ವೈನ್ ಪ್ರೊಡ್ಯೂಸರ್ಸ್ ಮತ್ತು ಸೆಲ್ಲರ್ಸ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಚೇರಂಬಾಣೆಯ ಮಿಲನ್ ಮುತ್ತಣ್ಣ ಹಾಗೂ ಕಾರ್ಯದರ್ಶಿಯಾಗಿ ನಂಜರಾಯಪಟ್ಟಣದ ಟಿ.ಕೆ.ಸುಮೇಶ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಮಡಿಕೇರಿಯ ಪೂವಮ್ಮ, ರಾಧ ಪೊನ್ನಪ್ಪ ಆಯ್ಕೆಯಾಗಿದ್ದು, ಖಜಾಂಚಿಯಾಗಿ ಹಾಲೇರಿಯ ಸಂಗೀತಾ ರಮೇಶ್, ಸಹ ಕಾರ್ಯದರ್ಶಿಯಾಗಿ ಮೂರ್ನಾಡಿನ ಜ್ಯೋತಿ ಪೂಣಚ್ಚ, ಸಂಘಟನಾ ಕಾರ್ಯದರ್ಶಿಯಾಗಿ ಸಂಪಾಜೆಯ ಶಿವಪ್ರಸಾದ್, ನಿರ್ದೇಶಕರುಗಳಾಗಿ ಮಡಿಕೇರಿಯ ಕೆ.ಆರ್.ಲತಾಕುಮಾರಿ, ಕರಿಕೆಯ ಬಿ.ಎಸ್.ರಮಾನಾಥ್ ಆಯ್ಕೆಯಾಗಿದ್ದಾರೆ.